ರಶ್ಮಿಕಾ ಮಂದಣ್ಣ ಹೊಸ ಅವತಾರ: ನಟಿ ಉರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು
Tuesday, February 28, 2023
ನವದೆಹಲಿ: ವಿವಿಧ ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ ಕೆಲವು ಹೇಳಿಕೆಗಳಿಂದಲೂ ಸಾಕಷ್ಟು ಟೀಕೆಗೂ ಒಳಗಾಗುತ್ತಿರುತ್ತಾರೆ. ಇದೀಗ ಅವರು ತಮ್ಮ ವಸ್ತ್ರದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಲ್ಲಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಉರ್ಫಿ ಜಾವೇದ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರು ಹೋಲಿಸಿ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ ಹಾಕುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಜೀ ಸಿನಿಮಾ ಅವಾರ್ಡ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಅವರು ವಿಚಿತ್ರವಾದ ಕಪ್ಪು ಉಡುಗೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಟ್ರೋಲ್‌ಗೆ ಓಳಗಾಗಿದ್ದಾರೆ.
ಜೀ ಸಿನಿಮಾ ಅವಾರ್ಡ್ ಕಾರ್ಯಕ್ರಮಲ್ಲಿ ಕಪ್ಪು ಬಣ್ಣದ ಶಾರ್ಟ್ ಡ್ರೆಸ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಈ ಚಿತ್ರ ವಿಚಿತ್ರ ಅವತಾರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ದರಿಂದ ನೆಟ್ಟಿಗರು ಸದಾ ಟೀಕೆಗೆ ಒಳಗಾಗುತ್ತಿರುವ ಉರ್ಫಿ ಜಾವೇದ್ ಅವರೊಂದಿಗೆ ರಶ್ಮಿಕಾ ಮಂದಣ್ಣರನ್ನು ಹೋಲಿಕೆ ಮಾಡುತ್ತಿದ್ದಾರೆ. ರಶ್ಮಿಕಾ, ಉರ್ಫಿ ಜಾವೇದ್ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.