ರೇಗಿಸಿದ ಯುವಕನಿಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ ವಿದ್ಯಾರ್ಥಿನಿ
Sunday, February 5, 2023
ಭುವನೇಶ್ವರ್: ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನನ್ನು ರೇಗಿಸಿದ ಯುವಕನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಘಟನೆ ಒಡಿಶಾದ ಅಂಗುಲ್ ಜಿಲ್ಲೆಯ ಪಲ್ಲಹಾರ ಬ್ಲಾಕ್‌ನ ಖಾಮರ್ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕ ಈ ಕಾಲೇಜು ವಿದ್ಯಾರ್ಥಿನಿಯನ್ನು ನೋಡಿ ಅಶ್ಲೀಲ ಕಾಮೆಂಟ್ ಮಾಡಿದ್ದಾನೆ. ಪರಿಣಾಮ ಸಿಟ್ಟಿಗೆದ್ದ ವಿದ್ಯಾರ್ಥಿನಿ ಯುವಕನ ವರ್ತನೆಯಿಂ ತಿರುಗಿ ಬಿದ್ದು ಆತನ ಕಪಾಳಕ್ಕೆ ನಡುರಸ್ತೆಯಲ್ಲೇ ಬಾರಿಸಿದ್ದಾಳೆ.
ಮಹಿಳೆಯರೊಂದಿಗೆ ನಡೆದುಕೊಳ್ಳುವಂತೆ ಯುವಕನಿಗೆ ಹುಡುಗಿ ಬುದ್ಧಿ ಮಾತು ಹೇಳಿದ್ದಾಳೆ. ಇನ್ನೊಂದೆಡೆ ಯುವಕ ಸಾರ್ವಜನಿಕವಾಗಿ ಕಪಾಳಕ್ಕೆ ಬಾರಿಸದಂತೆ ಹುಡುಗಿಯ ಬಳಿ ಮನವಿ ಮಾಡಿಕೊಂಡಿರುವುದು ವಿಡಿಯೋದಲ್ಲಿದೆ. ಅಲ್ಲದೆ, ವಿದ್ಯಾರ್ಥಿನಿಯ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ದೃಶ್ಯ ಸಹ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.