ದೇರಳಕಟ್ಟೆ: ಮದುವೆಯಾಗಿ 10ವರ್ಷಗಳ ಬಳಿಕ ಹೆರಿಗೆಯಾದ ಪತ್ನಿ: ಮಗು ನೋಡಲು ಆಸ್ಪತ್ರೆಗೆ ಬಂದ ತಂದೆ ಅಪಘಾತದಲ್ಲಿ ಮೃತ್ಯು
Saturday, March 18, 2023
ದೇರಳಕಟ್ಟೆ: ನಗರದ ದೇರಳಕಟ್ಟೆಯಲ್ಲಿ ನಡೆದ ಬೈಕ್ ಅಪಘಾತವೊಂದರಲ್ಲಿ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಶುಕ್ರವಾರ ಮೃತಪಟ್ಟಿದ್ದಾರೆ.
ಬುಡೋಳಿ ನಿವಾಸಿ ಫಾರೂಕ್ (35) ಮೃತಪಟ್ಟ ದುರ್ದೈವಿ.
ಇವರಿಗೆ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಈವರೆಗೆ ಮಕ್ಕಳಾಗಿರಲಿಲ್ಲ. ಆದರೆ 10 ವರ್ಷಗಳ ಬಳಿಕ ಮಾ.12ರಂದು ಅವರ ಪತ್ನಿಗೆ ಹೆರಿಗೆಯಾಗಿತ್ತು. ಫಾರೂಕ್ ಮಗುವನ್ನು ನೋಡಲು ದೇರಳಕಟ್ಟೆಯ ಆಸ್ಪತ್ರೆಗೆ ತೆರಳುತ್ತಿದ್ದರು. ಆದರೆ ದೇರಳಕಟ್ಟೆ ಆಸ್ಪತ್ರೆಯ ಬಳಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಶುಕ್ರವಾರ ಮೃತಪಟ್ಟಿದ್ದಾರೆ.