ಮಂಗಳೂರು: ನಿಷೇಧಿತ ನಿಷೇಧಿತ ಸಿಗರೇಟ್ ಮಾರಾಟದಂಗಡಿಗೆ ಪೊಲೀಸ್ ದಾಳಿ; 6.80 ಲಕ್ಷ ಮೊತ್ತದ ಇ-ಸಿಗರೇಟ್ ವಶಕ್ಕೆ, ಐವರು ಅರೆಸ್ಟ್
Thursday, March 30, 2023
ಮಂಗಳೂರು: ಕೇಂದ್ರ ಸರಕಾರದಿಂದ ನಿಷೇಧಗೊಂಡ ಇ-ಸಿಗರೇಟ್ ಗಳು ಹಾಗೂ ಎಚ್ಚರಿಕೆಯ ಚಿಹ್ನೆ ಅಳವಡಿಸಿರುವ ವಿದೇಶಿ ಕಂಪೆನಿಗಳ ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳಿಗೆ ದಾಳಿ ನಡೆಸಿರುವ ಬರ್ಕೆ ಪೊಲೀಸರು ಐವರನ್ನು ಬಂಧಿಸಿ, 6.80ಲಕ್ಷ ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹಸನ್ ಶರೀಫ್, ಇರ್ಷಾದ್, ಸಂತೋಷ, ಶಿವು ಅಲಿಯಾಸ್ ಶಿವಾನಂದ, ರಹಮತ್ತುಲ್ಲಾ ಬಂಧಿತ ಆರೋಪಿಗಳು.
ನಗರದ ಲಾಲ್ಬಾಗ್ನ ಸಾಯಿಬೀನ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಯೂನಿಕ್ ವರ್ಲ್ಡ್, ಫೆಂಟಾಸ್ಟಿಕ್ ವಲ್ಡ್, ಫೆಂಟಾಸ್ಟಿಕ್ ಶಾಪ್, ಆಮಂತ್ರಣ ಶಾಪ್, ಡೂ ಇಟ್, ವೆಂಚರ್ ಎಂಬ ಮಳಿಗೆಗಳಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕೇಂದ್ರ ಸರಕಾರದಿಂದ ನಿಷೇಧಿಸಲ್ಪಟ್ಟಿರುವ ಇ- ಸಿಗರೇಟ್ಗಳ ಹಾಗೂ ಎಚ್ಚರಿಕೆಯ ಚಿಹ್ನೆ ಅಳವಡಿಸಿರುವ ಸಿಗರೇಟ್ ಗಳು ಪತ್ತೆಯಾಗಿದೆ. ತಕ್ಷಣ ಪೊಲೀಸರು ಇ-ಸಿಗರೇಟ್ ಗಳನ್ನು ವಶಪಡಿಸಿಕೊಂಡು, ಐವರನ್ನು ಬಂಧಿಸಿದ್ದಾರೆ.
ಪೊಲೀಸರು ಈ ಸಂದರ್ಭ 1.50 ಲಕ್ಷ ರೂ. ಮೌಲ್ಯದ ವಿವಿಧ ವಿದೇಶಿ ಕಂಪೆನಿಗಳ 273 ಇ-ಸಿಗರೇಟ್ಗಳು ಹಾಗೂ ಎಚ್ಚರಿಕೆಯ ಚಿಹ್ನೆ ಅಳವಡಿಸಿರುವ 5.30 ಲಕ್ಷ ರೂ. ಮೌಲ್ಯದ 27 ಕಂಪೆನಿಗಳ ಸ್ವದೇಶಿ/ವಿದೇಶಿ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 6.80 ಲಕ್ಷ ರೂ. ಆಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಇ-ಸಿಗರೇಟ್ ನಿಷೇಧ ಕಾಯ್ದೆ - 2019 ಹಾಗೂ ಕೊಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.