-->
ಮಂಗಳೂರು: ಲಾರಿ ಢಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಸಂಬಂಧಿಗಳಿಬ್ಬರು ಸ್ಥಳದಲ್ಲಿಯೇ ದುರ್ಮರಣ

ಮಂಗಳೂರು: ಲಾರಿ ಢಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಸಂಬಂಧಿಗಳಿಬ್ಬರು ಸ್ಥಳದಲ್ಲಿಯೇ ದುರ್ಮರಣ



ಮಂಗಳೂರು: ನಗರದ ನಂತೂರು ಜಂಕ್ಷನ್ ನಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಟಿಪ್ಪರ್ ಲಾರಿ ಢಿಕ್ಕಿಯಾಗಿ ಸಂಬಂಧಿಗಳಿಬ್ಬರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ಮಾರ್ಚ್ 18ರ ಮಧ್ಯಾಹ್ನ ನಡೆದಿದೆ.
ಸುಲ್ತಾನ್ ಬತ್ತೇರಿ ನಿವಾಸಿ ಸ್ಯಾಮುಯೆಲ್  ಜೇಸುದಾಸ್ (66), ಮತ್ತು ಅವರ ಸೊಸೆಯ ದೊಡ್ಡಮನ ಮಗಳು ಭೂಮಿಕ (17) ಮೃತಪಟ್ಟ ದುರ್ದೈವಿಗಳು.

ಅತೀ ವೇಗದಿಂದ ಆಗಮಿಸಿದ ಟಿಪ್ಪರ್ ಲಾರಿಯು ನಂತೂರಿನಲ್ಲಿ ಆ್ಯಕ್ಟಿವಾ ಹೋಂಡಾ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಈ ವಾಹನದಲ್ಲಿದ್ದ ಇಬ್ಬರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಅವರ ಮೇಲೆಯೇ ಲಾರಿ ಹರಿದು ಇಬ್ಬರೂ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ. ಲಾರಿ ಸ್ಕೂಟರ್ ಅನ್ನು 10ಮೀಟರ್ ನಷ್ಟು ದೂರದವರೆಗೆ ಎಳೆದೊಯ್ದಿದೆ. ಪರಿಣಾಮ ಇಬ್ಬರೂ ಲಾರಿಯಡಿ ಸಿಲುಕಿ ಮೃತಪಟ್ಟಿದ್ದಾರೆ. ಈ ವೇಳೆ ಆಕ್ರೋಶಿತ ಸಾರ್ವಜನಿಕರು ಲಾರಿಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ‌.


ಅಪಘಾತದಿಂದ ಸ್ಥಳದಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸಿಪಿ ಗೀತಾ ಕುಲಕರ್ಣಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿ ಲಾರಿ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article