-->
ರಾಜ್ಯದ ಹಲವು ನಗರಗಳಲ್ಲಿ 'AIRTEL 5G ಪ್ಲಸ್' ಸೇವೆ ಆರಂಭ- ಇದೀಗ UNLIMITED 5G ಡೇಟಾವನ್ನು ಆನಂದಿಸಬಹುದು

ರಾಜ್ಯದ ಹಲವು ನಗರಗಳಲ್ಲಿ 'AIRTEL 5G ಪ್ಲಸ್' ಸೇವೆ ಆರಂಭ- ಇದೀಗ UNLIMITED 5G ಡೇಟಾವನ್ನು ಆನಂದಿಸಬಹುದು

 



 

ಭಾರತದ 2 ನೇ ಅತಿದೊಡ್ಡ ಟೆಲಿಕಾಂ ಕಂಪೆನಿ AIRTEL ರಾಜ್ಯದ ಹಲವು ನಗರಗಳು ಸೇರಿದಂತೆ ದೇಶದಲ್ಲಿ ಇದೀಗ ಒಟ್ಟಾರೆ 500 ನಗರಗಳಿಗೆ ತನ್ನ 'AIRTEL 5G ಪ್ಲಸ್' ಸೇವೆಯನ್ನು ವಿಸ್ತರಿಸಿರುವುದಾಗಿ ಹೇಳಿದೆ.  AIRTEL ಪ್ರತಿದಿನವೂ ಸಹ 30 ರಿಂದ 40 ನಗರಗಳನ್ನು 5G ವ್ಯಾಪ್ತಿಗೆ ಸೇರಿಸುತ್ತಿದ್ದು, ವಾರದಲ್ಲಿ ಹೊಸದಾಗಿ 235 ಹೊಸ ನಗರಗಳಿಗೆ 5G ಸೇವೆಯನ್ನು ವಿಸ್ತರಿಸಿದೆ. ಈ ಮೂಲಕ ಒಟ್ಟಾರೆಯಾಗಿ 500 ನಗರಗಳಿಗೆ ತನ್ನ 'ಏರ್ಟೆಲ್ 5G ಪ್ಲಸ್' ಸೇವೆಯನ್ನು ತಲುಪಿಸಿದೆ. 500 ನಗರಗಳ ಪೈಕಿ ರಾಜ್ಯದಲ್ಲಿ ಮಂಗಳೂರು, ಬೆಂಗಳೂರು,ಮೈಸೂರು, ಗುಲ್ಬರ್ಗ, ಹಾಸನ ಮತ್ತು ರಾಯಚೂರು ಸೇರಿ ಒಟ್ಟು 6 ನಗರಗಳಲ್ಲಿನ ಗ್ರಾಹಕರು 'AIRTEL 5G ಪ್ಲಸ್' ಸೇವೆಯನ್ನು ಬಳಸಲು ಅವಕಾಶ ಪಡೆದಿದ್ದಾರೆ ಎಂದು ಕಂಪೆನಿ ಮಾಹಿತಿ ನೀಡಿದೆ.



ಏರ್ಟೆಲ್ ಗ್ರಾಹಕರಿಗೂ ಅನಿಯಮಿತ 5G ಡೇಟಾ ಲಭ್ಯ.
JIOಗೆ ಸರಿಸಾಟಿಯಾಗಿ 5G ಸೇವೆಗಳನ್ನು ಹೊರತರುತ್ತಿರುವ AIRTEL ಕೂಡ ತನ್ನ 5G ಸೇವೆಯ ಜನಪ್ರಿಯತೆಗಾಗಿ ವೆಲ್ಕಮ್ ಆಫರ್ ನ್ನು ಪ್ರಕಟಿಸಿದೆ. ಇಲ್ಲಿಯವರೆಗೂ ಜಿಒ ತಾನು 5G ಸೇವೆಗಳನ್ನು ಆರಂಭಿಸಿರುವ ನಗರಗಳಲ್ಲಿ ಅನಿಯಮಿತ ಉಚಿತ 5G ಡೇಟಾ ಬಳಕೆಗೆ ಅನುಮತಿ ನೀಡಿತ್ತು. ಇದೀಗ AIRTEL ಕೂಡ ಪರಿಚಯಾತ್ಮಕ ಕೊಡುಗೆಯಾಗಿ ತನ್ನ 5G ಪ್ಲಸ್ ನೆಟ್ವರ್ಕ್ನಲ್ಲಿ ಅನಿಯಮಿತ 5G ಆನಂದಿಸಬಹುದು ಎಂದು ತಿಳಿಸಿದೆ. " AIRTEL 5G ಬಳಕೆದಾರರು ಈಗ ಡೇಟಾ ಮಿತಿಗಳು ಅಥವಾ ದೈನಂದಿನ ಡೇಟಾ ಕೋಟಾದ ಬಗ್ಗೆ ಚಿಂತಿಸಬೇಕಾಗಿಲ್ಲ. ಇದೀಗ 5G ಡೇಟಾ ಬಳಕೆಗೆ ಯಾವುದೇ ಮಿತಿಯಿಲ್ಲ. 239 ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಎಲ್ಲಾ ಗ್ರಾಹಕರು ಇದೀಗ UNLIMITED 5G ಡೇಟಾವನ್ನು ಆನಂದಿಸಬಹುದು" ಎಂದು AIRTEL ತಿಳಿಸಿದೆ.



AIRTEL ಅನಿಯಮಿತ 5G ಡೇಟಾ ಆಫರ್ ಪ್ರಯೋಜನ ಪಡೆಯಲು ಚಂದಾದಾರರು 5G ಬೆಂಬಲಿತ ಸ್ಮಾರ್ಟ್ಫೋನ್ಹಾಗೂ 5G ಲಭ್ಯ ಇರುವ ಪ್ರದೇಶದಲ್ಲಿ ಇರಬೇಕು. ನಂತರ "UNLIMITED 5G ಡೇಟಾ" ಆಫರ್ ಕ್ಲೈಮ್ ಮಾಡಲು ಏರ್ಟೆಲ್ ಗ್ರಾಹಕರು ಕಂಪನಿಯ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ತೆರೆಯಬೇಕಾಗುತ್ತದೆ. ಇಲ್ಲಿ ಬ್ಯಾನರ್ ಮುಖ್ಯ ಪುಟದಲ್ಲಿ 'Claim Unlimited 5G data' ಕಾಣಿಸುತ್ತದೆ. ನಂತರ ಆಯ್ಕೆಯ ಮೇಲೆ TAP ಮಾಡಿದಾಗ, ಮತ್ತೊಂದು WINDOW ತೆರೆದುಕೊಳ್ಳುತ್ತದೆ. ನಂತರ ಪೇಜ್ ಕೆಳಭಾಗದಲ್ಲಿ Claim Now ಬಟನ್ ಕಾಣುವಿರಿ. ಬಟನ್ ಟ್ಯಾಪ್ ಮಾಡುವ ಮೂಲಕ ಡೇಟಾ ಕೊಡುಗೆ ಸಕ್ರಿಯಗೊಳಿಸಬಹುದು. ಇದೀಗ ನಿಮ್ಮ ರೀಚಾರ್ಜ್ ಪ್ಯಾಕ್ ಮಾನ್ಯತೆಯವರೆಗೆ ಅನಿಯಮಿತ 5G ಡೇಟಾ ಕಾರ್ಯನಿರ್ವಹಿಸುತ್ತದೆ.

ಅನಿಯಮಿತ 5G ಡೇಟಾ ಆಫರ್ ಪ್ರಕಟಣೆಯ ಕುರಿತಂತೆ ಪ್ರತಿಕ್ರಿಯಿಸಿರುವ ಭಾರ್ತಿ AIRTELನ ಗ್ರಾಹಕ ವ್ಯವಹಾರದ ನಿರ್ದೇಶಕ ಶಾಶ್ವತ್ ಶರ್ಮಾ ಅವರು, "ನಮ್ಮ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ಸಂತೋಷಪಡಿಸಲು ನಾವು ಯಾವಾಗಲೂ ಶ್ರಮಿಸುತ್ತಿದ್ದೇವೆ. ಹೊಸ ಪರಿಚಯಾತ್ಮಕ ಕೊಡುಗೆಯ ಮೂಲಕ ನಮ್ಮ ಗ್ರಾಹಕರು ಡೇಟಾ ಮಿತಿಗಳ ಬಗ್ಗೆ ಚಿಂತಿಸದೆ ಅತ್ಯಂತ ವೇಗದಲ್ಲಿ ಇಂಟರ್ನೆಟ್ ಸರ್ಫ್ ಮಾಡಲು, ಸ್ಟ್ರೀಮ್ ಮಾಡಲು, ಚಾಟ್ ಮಾಡಲು ಮತ್ತು ಬಹು ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ. ನಮ್ಮ ಗ್ರಾಹಕರು ವಿಶ್ವ ದರ್ಜೆಯ AIRTEL 5G ಪ್ಲಸ್ ಶಕ್ತಿಯನ್ನು ಆನಂದಿಸುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದ್ದರು.

 

Ads on article

Advertise in articles 1

advertising articles 2

Advertise under the article