ರಾಜ್ಯದ ಹಲವು ನಗರಗಳಲ್ಲಿ 'AIRTEL 5G ಪ್ಲಸ್' ಸೇವೆ ಆರಂಭ- ಇದೀಗ UNLIMITED 5G ಡೇಟಾವನ್ನು ಆನಂದಿಸಬಹುದು
ಭಾರತದ 2 ನೇ ಅತಿದೊಡ್ಡ ಟೆಲಿಕಾಂ ಕಂಪೆನಿ AIRTEL ರಾಜ್ಯದ ಹಲವು ನಗರಗಳು ಸೇರಿದಂತೆ ದೇಶದಲ್ಲಿ ಇದೀಗ ಒಟ್ಟಾರೆ 500 ನಗರಗಳಿಗೆ ತನ್ನ 'AIRTEL 5G ಪ್ಲಸ್' ಸೇವೆಯನ್ನು ವಿಸ್ತರಿಸಿರುವುದಾಗಿ ಹೇಳಿದೆ. AIRTEL ಪ್ರತಿದಿನವೂ ಸಹ 30 ರಿಂದ 40 ನಗರಗಳನ್ನು 5G ವ್ಯಾಪ್ತಿಗೆ ಸೇರಿಸುತ್ತಿದ್ದು, ಈ ವಾರದಲ್ಲಿ ಹೊಸದಾಗಿ 235 ಹೊಸ ನಗರಗಳಿಗೆ 5G ಸೇವೆಯನ್ನು ವಿಸ್ತರಿಸಿದೆ. ಈ ಮೂಲಕ ಒಟ್ಟಾರೆಯಾಗಿ 500 ನಗರಗಳಿಗೆ ತನ್ನ 'ಏರ್ಟೆಲ್ 5G ಪ್ಲಸ್' ಸೇವೆಯನ್ನು ತಲುಪಿಸಿದೆ. ಈ 500 ನಗರಗಳ ಪೈಕಿ ರಾಜ್ಯದಲ್ಲಿ ಮಂಗಳೂರು, ಬೆಂಗಳೂರು,ಮೈಸೂರು, ಗುಲ್ಬರ್ಗ, ಹಾಸನ ಮತ್ತು ರಾಯಚೂರು ಸೇರಿ ಒಟ್ಟು 6 ನಗರಗಳಲ್ಲಿನ ಗ್ರಾಹಕರು 'AIRTEL 5G ಪ್ಲಸ್' ಸೇವೆಯನ್ನು ಬಳಸಲು ಅವಕಾಶ ಪಡೆದಿದ್ದಾರೆ ಎಂದು ಕಂಪೆನಿ ಮಾಹಿತಿ ನೀಡಿದೆ.
ಏರ್ಟೆಲ್ ಗ್ರಾಹಕರಿಗೂ ಅನಿಯಮಿತ 5G ಡೇಟಾ ಲಭ್ಯ.
JIOಗೆ ಸರಿಸಾಟಿಯಾಗಿ 5G ಸೇವೆಗಳನ್ನು ಹೊರತರುತ್ತಿರುವ AIRTEL ಕೂಡ ತನ್ನ 5G ಸೇವೆಯ ಜನಪ್ರಿಯತೆಗಾಗಿ ವೆಲ್ಕಮ್ ಆಫರ್ ನ್ನು ಪ್ರಕಟಿಸಿದೆ. ಇಲ್ಲಿಯವರೆಗೂ ಜಿಒ ತಾನು 5G ಸೇವೆಗಳನ್ನು ಆರಂಭಿಸಿರುವ ನಗರಗಳಲ್ಲಿ ಅನಿಯಮಿತ ಉಚಿತ 5G ಡೇಟಾ ಬಳಕೆಗೆ ಅನುಮತಿ ನೀಡಿತ್ತು. ಇದೀಗ AIRTEL ಕೂಡ ಪರಿಚಯಾತ್ಮಕ ಕೊಡುಗೆಯಾಗಿ ತನ್ನ 5G ಪ್ಲಸ್ ನೆಟ್ವರ್ಕ್ನಲ್ಲಿ ಅನಿಯಮಿತ 5G ಆನಂದಿಸಬಹುದು ಎಂದು ತಿಳಿಸಿದೆ. " AIRTEL 5G ಬಳಕೆದಾರರು ಈಗ ಡೇಟಾ ಮಿತಿಗಳು ಅಥವಾ ದೈನಂದಿನ ಡೇಟಾ ಕೋಟಾದ ಬಗ್ಗೆ ಚಿಂತಿಸಬೇಕಾಗಿಲ್ಲ. ಇದೀಗ 5G ಡೇಟಾ ಬಳಕೆಗೆ ಯಾವುದೇ ಮಿತಿಯಿಲ್ಲ. 239 ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಎಲ್ಲಾ ಗ್ರಾಹಕರು ಇದೀಗ UNLIMITED 5G ಡೇಟಾವನ್ನು ಆನಂದಿಸಬಹುದು" ಎಂದು AIRTEL ತಿಳಿಸಿದೆ.