-->
Airtel ಗ್ರಾಹಕರಿಗೆ ಸಿಹಿಸುದ್ದಿ ಪ್ರಕಟ: ಗ್ರಾಹಕರು ಫುಲ್ ಖುಷ್!

Airtel ಗ್ರಾಹಕರಿಗೆ ಸಿಹಿಸುದ್ದಿ ಪ್ರಕಟ: ಗ್ರಾಹಕರು ಫುಲ್ ಖುಷ್!

 

 


ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ airtel  ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಹೊಸ ಅನಿಯಮಿತ 5G ಡೇಟಾ ಆಫರ್ ಪ್ರಕಟಿಸಿದ್ದು, ರಿಲಯನ್ಸ್ ಜಿಯೋಗೆ ಟಕ್ಕರ್ ನೀಡುವ ಸಲುವಾಗಿ ಇದೀಗ airtel  ಕೂಡ ಅಸ್ತಿತ್ವದಲ್ಲಿರುವ ಎಲ್ಲಾ ಯೋಜನೆಗಳಲ್ಲಿ ಡೇಟಾ ಬಳಕೆಯ ಮೇಲಿನ ಮಿತಿಯನ್ನು ತೆಗೆದುಹಾಕುವುದಾಗಿ ಘೋಷಿಸಿದೆ.

 

"airtel 5G ಬಳಕೆದಾರರು ಈಗ ಡೇಟಾ ಮಿತಿಗಳು ಅಥವಾ ದೈನಂದಿನ ಡೇಟಾ ಕೋಟಾದ ಬಗ್ಗೆ ಚಿಂತಿಸಬೇಕಾಗಿಲ್ಲ. ಇದೀಗ 5G ಡೇಟಾ ಬಳಕೆಗೆ ಯಾವುದೇ ಮಿತಿಯಿಲ್ಲ. 239 ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಎಲ್ಲಾ ಪೋಸ್ಟ್ಪೇಯ್ಡ್ ಮತ್ತು ಪ್ರಿಪೇಯ್ಡ್ ಗ್ರಾಹಕರು ಇದೀಗ ಅನಿಯಮಿತ 5G ಡೇಟಾವನ್ನು ಆನಂದಿಸಬಹುದು" ಎಂದು airtel ಸಂಸ್ಥೆ ತಿಳಿಸಿದೆ.



ಭಾರತದಲ್ಲಿ 5G ಒದಗಿಸುವಲ್ಲಿ ಮುಂಚೂಣಿಯ ಟೆಲಿಕಾಂ ಕಂಪೆನಿಗಳಾಗಿ ಗುರುತಿಸಿಕೊಂಡಿರುವ jio ಹಾಗೂ airtel ಎರಡೂ ಪೈಪೋಟಿಗೆ ಬಿದ್ದಿವೆ. ಇಲ್ಲಿಯವರೆಗೂ jio ತಾನು 5G ಸೇವೆಗಳನ್ನು ಆರಂಭಿಸಿರುವ ನಗರಗಳಲ್ಲಿ ಅನಿಯಮಿತ ಉಚಿತ 5G ಡೇಟಾ ಬಳಕೆಗೆ ಅನುಮತಿಸಿತ್ತು. ಇದೀಗ airtel ಕೂಡ ಪರಿಚಯಾತ್ಮಕ ಕೊಡುಗೆಯಾಗಿ ತನ್ನ 5G ಪ್ಲಸ್ ನೆಟ್ವರ್ಕ್ನಲ್ಲಿ ಅನಿಯಮಿತ 5G ಡೇಟಾವನ್ನು ಆನಂದಿಸಬಹುದು ಎಂದು ತಿಳಿಸಿದೆ.

 

airtel 5G ಪ್ಲಸ್ ಈಗ ಸುಮಾರು 270 ಭಾರತೀಯ ನಗರಗಳಲ್ಲಿ ಲಭ್ಯವಿದೆ. ಮಾರ್ಚ್ 2024 ವೇಳೆಗೆ ಎಲ್ಲಾ ನಗರಗಳಲ್ಲಿ 5G ಪ್ಲಸ್ ಸೇವೆ ಲಭ್ಯವಿರಲಿದ್ದು, ಎಲ್ಲಾ ನಗರಗಳಲ್ಲಿನ ಗ್ರಾಹಕರು "unlimited 5G ಡೇಟಾ" ಆಫರ್ ಕ್ಲೈಮ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.

 


airtel ಅನಿಯಮಿತ 5G ಡೇಟಾ ಆಫರ್ ಪ್ರಯೋಜನ ಪಡೆಯಲು ಚಂದಾದಾರರು 5G ಬೆಂಬಲಿತ ಸ್ಮಾರ್ಟ್ಫೋನ್ಹಾಗೂ 5G ಲಭ್ಯ ಇರುವ ಪ್ರದೇಶದಲ್ಲಿ ಇರಬೇಕು. ನಂತರ "airtel 5G ಡೇಟಾ" ಆಫರ್ ಕ್ಲೈಮ್ ಮಾಡಲು ಏರ್ಟೆಲ್ ಗ್ರಾಹಕರು ಕಂಪನಿಯ airtel thanks app ತೆರೆಯಬೇಕಾಗುತ್ತದೆ. ಇಲ್ಲಿ ಬ್ಯಾನರ್ ಮುಖ್ಯ ಪುಟದಲ್ಲಿ 'Claim Unlimited 5G data' ಕಾಣಿಸುತ್ತದೆ. ನಂತರ ಆಯ್ಕೆಯ ಮೇಲೆ ಟ್ಯಾಪ್ ಮಾಡಿದಾಗ, ಮತ್ತೊಂದು ವಿಂಡೋ ತೆರೆದುಕೊಳ್ಳುತ್ತದೆ. ನಂತರ ಪೇಜ್ ಕೆಳಭಾಗದಲ್ಲಿ Claim Now  ಎಂಬ ಬಟನ್ ಕಾಣುವಿರಿ. ಬಟನ್ ಟ್ಯಾಪ್ ಮಾಡುವ ಮೂಲಕ ಡೇಟಾ ಕೊಡುಗೆ ಸಕ್ರಿಯ ಮಾಡಬಹುದು. ಇದೀಗ ನಿಮ್ಮ ರೀಚಾರ್ಜ್ ಪ್ಯಾಕ್ ಮಾನ್ಯತೆಯವರೆಗೆ ಅನಿಯಮಿತ 5G ಡೇಟಾ ಕಾರ್ಯನಿರ್ವಹಿಸುತ್ತದೆ.


ಅನಿಯಮಿತ 5G ಡೇಟಾ ಆಫರ್ ಪ್ರಕಟಣೆಯ ಕುರಿತಂತೆ ಪ್ರತಿಕ್ರಿಯಿಸಿರುವ ಭಾರ್ತಿ ಏರ್ಟೆಲ್ ಗ್ರಾಹಕ ವ್ಯವಹಾರದ ನಿರ್ದೇಶಕ ಶಾಶ್ವತ್ ಶರ್ಮಾ ಅವರು, “ airtel ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ಸಂತೋಷಪಡಿಸಲು ನಾವು ಯಾವಾಗಲೂ ಶ್ರಮಿಸುತ್ತಿದ್ದೇವೆ. ಹೊಸ ಪರಿಚಯಾತ್ಮಕ ಕೊಡುಗೆಯ ಮೂಲಕ ನಮ್ಮ ಗ್ರಾಹಕರು ಡೇಟಾ ಮಿತಿಗಳ ಬಗ್ಗೆ ಚಿಂತಿಸದೆ ಅತ್ಯಂತ ವೇಗದಲ್ಲಿinternet ಸರ್ಫ್ ಮಾಡಲು, ಸ್ಟ್ರೀಮ್ ಮಾಡಲು, ಚಾಟ್ ಮಾಡಲು ಮತ್ತು ಬಹು ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ. ನಮ್ಮ ಗ್ರಾಹಕರು ವಿಶ್ವ ದರ್ಜೆಯ ಏರ್ಟೆಲ್ 5G ಪ್ಲಸ್ ಶಕ್ತಿಯನ್ನು ಆನಂದಿಸುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article