ಮಂಗಳೂರು: ಜ್ಯುವೆಲ್ಲರಿ ಶಾಪ್ ಸಿಬ್ಬಂದಿ ಹತ್ಯೆ ಪ್ರಕರಣ: ಹಂತಕ ಕಾಸರಗೋಡಿನಲ್ಲಿ ಬಂಧನ.
Friday, March 3, 2023
ಮಂಗಳೂರು: ನಗರದ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿಯನ್ನು ಕೊಲೆಗೈದು ಚಿನ್ನಾಭರಣ ದರೋಡೆಡೆಗೈದು ಪರಾರಿಯಾಗಿರುವ ಆರೋಪಿಯನ್ನು ತಿಂಗಳ ಬಳಿಕ ಕೇರಳ ರಾಜ್ಯದ ಕಾಸರಗೋಡಿನಲ್ಲಿ ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಲ್ಲಿಕೋಟೆಯ ಚಟ್ಟನಾಡುತ್ ಕೆಳಮನೆ ನಿವಾಸಿ ಶಿಫಾಝ್(33) ಬಂಧಿತ ಆರೋಪಿ. ಕಾಸರಗೋಡು ಡಿವೈಎಸ್ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡವು ಕಾಸರಗೋಡಿನ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಗುರುವಾರ ಬಂಧಿಸಿದೆ.
ಫೆ.3ರಂದು ಮಧ್ಯಾಹ್ನದ ವೇಳೆಗೆ ಮಂಗಳೂರಿನ ಹಂಪನಕಟ್ಟೆಯ 'ಮಂಗಳೂರು ಜ್ಯುವೆಲ್ಲರ್ಸ್' ಎಂಬ ಹೆಸರಿನ ಚಿನ್ನದಂಗಡಿಯ ಸಿಬ್ಬಂದಿ ರಾಘವೇಂದ್ರ ಆಚಾರ್ಯ(50) ನನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿತ್ತು. ಜುವೆಲ್ಲರಿ ಮಾಲಕ ಕೇಶವ ಆಚಾರ್ಯ ಅವರು ಮಾಸ್ಕ್ ಧರಿಸಿದ್ದ ದುಷ್ಕರ್ಮಿಯೋರ್ವನು ಈ ಕೃತ್ಯ ಎಸಗಿದ್ದ ಎಂದು ಪೊಲೀಸ್ ದೂರು ದಾಖಲಿಸಿದ್ದರು. ಅಲ್ಲದೆ ಮಳಿಗೆಯಲ್ಲಿದ್ದ ಚಿನ್ನಾಭರಣವನ್ನು ದರೋಡೆಗೈಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಆರೋಪಿಯ ಬಂಧನಕ್ಕೆ ಮಂಗಳೂರು ಪೊಲೀಸರು ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿತ್ತು. ಶಂಕಿತ ಆರೋಪಿಯ ಸಿಸಿ ಕ್ಯಾಮರಾದ ಚಿತ್ರವನ್ನು ಬಿಡುಗಡೆ ಮಾಡಿ ಆತನ ಪತ್ತೆಗೆ ಸಾರ್ವಜನಿಕರ ಸಹಕಾರವನ್ನು ಕೋರಲಾಗಿತ್ತು. ಇದೀಗ ಆರೋಪಿ ಕಾಸರಗೋಡು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತ ದರೋಡೆ ನಡೆಸುವ ಉದ್ದೇಶದಿಂದಲೇ ಕೊಲೆ ನಡೆಸಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಆರೋಪಿ ಶಿಫಾಝ್ ನನ್ನು ಮಂಗಳೂರು ಪೊಲೀಸರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯಲಿದೆ.