-->
ಪುದುಚೆರಿಯಲ್ಲಿ BJP ಕಾರ್ಯಕರ್ತ ಟಾರ್ಗೆಟ್: ಗೃಹ ಸಚಿವರ ಸಂಬಂಧಿಕನ MURDER

ಪುದುಚೆರಿಯಲ್ಲಿ BJP ಕಾರ್ಯಕರ್ತ ಟಾರ್ಗೆಟ್: ಗೃಹ ಸಚಿವರ ಸಂಬಂಧಿಕನ MURDER

 



 

ಪುದುಚೆರಿ: ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಭೀಕರ ಕೃತ್ಯವೊಂದು ಸಂಭವಿಸಿದೆ. ಜನನಿಬಿಡ ಪ್ರದೇಶದಲ್ಲಿ BJP ಕಾರ್ಯಕರ್ತನ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ನೋಡ ನೋಡುತ್ತಲೇ ಕೊಲೆ ಮಾಡಿದ್ದಾರೆ



ಪುದುಚೆರಿಯ ಕನುವಪೆಟ್ಟೈನಲ್ಲಿ ಕುಕೃತ್ಯ ನಡೆದಿದೆ.  ಬಿಜೆಪಿ ಕಾರ್ಯಕರ್ತ  ಸೆಂಥಿಲ್ ಕುಮಾರ್ (45)   ಮೃತ ವ್ಯಕ್ತಿ. ಮೃತ ಸೆಂಥಿಲ್ ಕುಮಾರ್ ಪುದುಚೆರಿ ಸರ್ಕಾರದ ಗೃಹ ಸಚಿವ ನಮಸ್ಸಿವಾಯಂ ಅವರ ಸಂಬಂಧಿಕನಾಗಿದ್ದಾನೆ.  ಜನ ನಿಬಿಡ ಪ್ರದೇಶದಲ್ಲಿ ಬೇಕರಿಯೊಂದರ ಬಳಿ ನಿಂತಿದ್ದ ಸೆಂಥಿಲ್ ಕುಮಾರ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.




ಮೊದಲಿಗೆ ಬೈಕ್ನಲ್ಲಿ ಬಂದ ಇಬ್ಬರ ಪೈಕಿ ಓರ್ವ ವ್ಯಕ್ತಿ ನಾಡ ಬಾಂಬ್ ದಾಳಿ ನಡೆಸಿದ್ದಾನೆ. ನಂತರ ಇನ್ನಿತರರು ನಾಲ್ಕೂ ದಿಕ್ಕುಗಳಿಂದ ಸೆಂಥಿಲ್ ಕುಮಾರ್ ಮೇಲೆ ಎರಗಿದ್ದಾರೆ. ಮಚ್ಚು, ಕತ್ತಿ ಸೇರಿದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕ್ಷಣಾರ್ಧದಲ್ಲಿ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಒಟ್ಟು ಏಳು ಮಂದಿಯ ತಂಡ ಕೃತ್ಯ ಎಸಗಿದೆ. ಘಟನೆ ಸಂಬಂಧ ಪೊಲೀಸರಿಗೆ CCTV ದೃಶ್ಯಾವಳಿ ಕೂಡಾ ಸಿಕ್ಕಿದೆ. ಬಾಂಬ್ ದಾಳಿ ಹಾಗೂ ಮಚ್ಚಿನೇಟಿಗೆ ತುತ್ತಾದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೊದಲಿಗೆ ಎರಡು ನಾಡ ಬಾಂಬ್ಗಳನ್ನು ಸೆಂಥಿಲ್ ಕುಮಾರ್ ಮೇಲೆ ಎಸೆದ ದುಷ್ಕರ್ಮಿಗಳು, ನಂತರ ಆತನ ಮೇಲೆ ದಾಳಿಯನ್ನು ಮಾಡಿದ್ದಾರೆ. ಆತ ಸಾವನ್ನಪ್ಪಿದ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.




ಘಟನೆಯ ವಿಚಾರ ಕಾಡ್ಗಿಚ್ಚಿನಂತೆ ಪುದುಚೆರಿಯಾದ್ಯಂತ ಹಬ್ಬಿದ್ದೇ ತಡ, ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಪುದುಚೆರಿ ಗೃಹ ಸಚಿವ ನಮಸ್ಸಿವಾಯಂ ಅವರೂ ಕೂಡಾ ಸ್ಥಳಕ್ಕೆ ಧಾವಿಸಿ ತನ್ನ ಸಂಬಂಧಿಯ ಮೃತ ದೇಹ ನೋಡಿ ಕಣ್ಣೀರಿಟ್ಟಿದ್ದಾರೆ

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈಗಾಗಲೇ ಕೃತ್ಯ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ, ಇದೇ ದೃಶ್ಯಾವಳಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಪೈಕಿ ನಾಡ ಬಾಂಬ್ ದಾಳಿ ನಡೆಸಿದ ವ್ಯಕ್ತಿಯ ಚಹರೆ ಸೇರಿದಂತೆ ಹಲವು ಆರೋಪಿಗಳ ವಿವರ ಸಂಗ್ರಹಕ್ಕೆ ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ.




ನಾಡ ಬಾಂಬ್ ದಾಳಿ ನಡೆಸಿದ ಬಳಿಕ ಹೊಗೆ ತುಂಬಿಕೊಂಡ ಹಿನ್ನೆಲೆಯಲ್ಲಿ ಆರೋಪಿಗಳ ಚಹರೆ ಸ್ಪಷ್ಟವಾಗಿ ಕಾಣುತ್ತಿಲ್ಲ. ಆದರೆ, ಆರೋಪಿಗಳು ಹತ್ಯೆ ಮಾಡುವ ಉದ್ದೇಶದಿಂದಲೇ ಪೂರ್ವ ನಿಯೋಜಿತವಾಗಿ PLAN ಮಾಡಿಕೊಂಡು ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ದೃಢವಾಗುತ್ತಿದೆ. ರಾಜಕೀಯ ಪ್ರೇರಿತ ದಾಳಿಗಳು ಹೊಸದಲ್ಲವಾದ್ರೂ, ಬಿಜೆಪಿ ಬೆಂಬಲಿತ NDA ಸರ್ಕಾರವೇ ಅಸ್ತಿತ್ವದಲ್ಲಿ ಇರುವ ಪುದುಚೆರಿಯಲ್ಲಿ ಗೃಹ ಸಚಿವರ ಸಂಬಂಧಿಕನ ಮೇಲೇ ದಾಳಿ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

Ads on article

Advertise in articles 1

advertising articles 2

Advertise under the article