ವರ್ಷದ ಮೊದಲ ಸೂರ್ಯಗ್ರಹಣದಿಂದ ಯಾವ ರಾಶಿಗೆ ಶುಭ?ಯಾವ ರಾಶಿಗೆ ಅಶುಭ? ಇಲ್ಲಿದೆ ನೋಡಿ..!
Friday, March 24, 2023
2023ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ನಡೆಯಲಿದೆ. ಭಾರತದಲ್ಲಿ, ಈ ಸೂರ್ಯಗ್ರಹಣವು ಬೆಳಿಗ್ಗೆ 7.4 ರಿಂದ ಪ್ರಾರಂಭವಾಗಿ ಮಧ್ಯಾಹ್ನ 12.29 ರವರೆಗೆ ಇರುತ್ತದೆ. ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯಗ್ರಹಣವು ಮೇಷ ರಾಶಿಯಲ್ಲಿ ನಡೆಯುತ್ತಿದ್ದು, ಎಲ್ಲಾ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಸೂರ್ಯಗ್ರಹಣವು ಈ ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ :
ಸೂರ್ಯಗ್ರಹಣದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಇರುತ್ತದೆ. ಗ್ರಹಣದ ಅಶುಭ ಪರಿಣಾಮಗಳ ಬಗ್ಗೆ ಹೇಳುವುದಾದರೆ ಈ ಸೂರ್ಯಗ್ರಹಣವು ಮೇಷ ರಾಶಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಮೇಷ ರಾಶಿಯ ಜನರು ಗ್ರಹಣದ ಸಮಯದಲ್ಲಿ ತಮ್ಮ ವೃತ್ತಿಜೀವನದಲ್ಲಿ ಗೊಂದಲವನ್ನು ಅನುಭವಿಸಬಹುದು. ಟೆನ್ಷನ್ ಇರುತ್ತದೆ. ಇದಲ್ಲದೆ, ಸಿಂಹ ಮತ್ತು ಕನ್ಯಾ ರಾಶಿಯವರು ಕೂಡಾ ತಮ್ಮ ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು.
ಈ ರಾಶಿಯವರ ಮೇಲೆ ಸೂರ್ಯಗ್ರಹಣದ ಮಂಗಳಕರ ಪರಿಣಾಮ :
ಮತ್ತೊಂದೆಡೆ, ವರ್ಷದ ಮೊದಲ ಸೂರ್ಯಗ್ರಹಣವು ವೃಷಭ, ಮಿಥುನ ಮತ್ತು ಧನು ರಾಶಿಯವರಿಗೆ ಮಂಗಳಕರವಾಗಿರಲಿದೆ. ವೃಷಭ ರಾಶಿಯವರಿಗೆ ಹೊಸ ಕೆಲಸ ಸಿಗಬಹುದು. ಸಾಲ ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗುವಿರಿ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಮತ್ತೊಂದೆಡೆ, ಮಿಥುನ ರಾಶಿಯವರು ಕೆಲವು ದೊಡ್ಡ ಸಮಸ್ಯೆಗಳಿಂದ ಪರಿಹಾರ ಸಿಗಬಹುದು. ಈ ಸೂರ್ಯಗ್ರಹಣವು ಧನು ರಾಶಿಯವರ ಸಂಪತ್ತನ್ನು ಹೆಚ್ಚಿಸುತ್ತದೆ.