Co-Op Societies Inspectors Post | ಕರ್ನಾಟಕ ಸರ್ಕಾರದ ಸಹಕಾರ ಸಂಘಗಳ ನಿರೀಕ್ಷಕರು ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದ ಸಹಕಾರ ಸಂಘಗಳ ನಿರೀಕ್ಷಕರು ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರಿಕ ಸೇವೆಗಳ ನೇರ ನೇಮಕಾತಿ ನಿಯಮಗಳ ಪ್ರಕಾರ ಸಹಕಾರ ಸಂಘಗಳ ನಿರೀಕ್ಷಕರು ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸಹಕಾರಿ ಇಲಾಖೆಯಲ್ಲಿ ಸಹಕಾರ ಸಂಘಗಳ ನಿರೀಕ್ಷಕರು ಹುದ್ದೆಗೆ ನೇರ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸಲು ಆರಂಭದ ದಿನ: 30-03-2023
ಅರ್ಜಿ ಸಲ್ಲಿಸಲು ಕೊನೆಯ ದಿನ: 30-04-2023
ಶುಲ್ಕ ಪಾವತಿಗೆ ಅಂತಿಮ ದಿನ: 02-05-2023
ಕೆಪಿಎಸ್‌ಸಿ ಪ್ರಕಟಿಸಿದ ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳನ್ನು ಮತ್ತು ಅರ್ಹತಾ ಷರ್ತುಗಳನ್ನು ಅಭ್ಯರ್ಥಿಗಳು ಓದಿಕೊಳ್ಳತಕ್ಕದ್ದು.
ಅಭ್ಯರ್ಥಿಗಳು ಶುಲ್ಕವನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು. ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಆಯ್ಕೆಯನ್ನು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಸಲಾಗುವುದು.
ವಯೋಮಿತಿ- 18-35 ವಯೋಮಿತಿಯಲ್ಲಿ ಸಡಿಲಿಕೆ ಇದೆ.
ವೇತನ ಶ್ರೇಣಿ - ರೂ. 27,650/- - 52650/-
ಒಟ್ಟು ಖಾಲಿ ಇರುವ ಹುದ್ದೆಗಳು- 47
ಹೆಚ್ಚಿನ ವಿವರಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ ಅಥವಾ ಆಯೋಗ ಹೊರಡಿಸಿದ ಅಧಿಸೂಚನೆಯನ್ನು ಪರಿಶೀಲಿಸಬಹುದು...