ಮಂಗಳೂರು: ನೆರೆಮನೆಯವರಿಗೆ ಕೋವಿ ತೋರಿಸಿ ಬೆದರಿಕೆ, ಪೊಲೀಸರಿಗೆ ಬಿಸಿನೀರು ಎರಚಿ ರಂಪಾಟ ಮಾಡಿದ ದಂಪತಿ
Friday, March 3, 2023
ಮಂಗಳೂರು: ನೆರೆಮನೆಯವರಿಗೆ ಕೋವಿ ತೋರಿಸಿ ಬೆದರಿಕೆಯೊಡ್ಡಿ, ಪೊಲೀಸರಿಗೆ ಬಿಸಿ ನೀರು ಎರಚಿ ದಂಪತಿ ರಂಪಾಟ ಮಾಡಿದ ಘಟನೆ ಮೂಡುಶೆಡ್ಡೆ ಗ್ರಾಪಂ ವ್ಯಾಪ್ತಿಯ ಎದುರು ಪದವಿನಲ್ಲಿ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪತಿಯನ್ನು ಕೋವಿ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.
ಎದುರು ಪದವು ನಿವಾಸಿಗಳಾದ ರಾಜೇಶ್ ರೈ ಹಾಗೂ ರಾಜೇಶ್ವರಿ ದಂಪತಿ ನೆರೆಮನೆಯ ಯುವತಿಯೊಬ್ಬರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದರು. ಆ ಬಳಿಕ ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕ ಕೋವಿ ತೋರಿಸಿ ಬೆದರಿಸಿ ಬೆದರಿಕೆಯೊಡ್ಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಕಾವೂರು ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೆ ದಂಪತಿ ಬಿಸಿನೀರು ಎರಚಿ ರಂಪಾಟ ಮಾಡಿದ್ದಾರೆ. ಆ ಬಳಿಕ ಪತಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಕಾವೂರು ಠಾಣಾ ಪೊಲೀಸರು ಕೋವಿ ಸಹಿತ ರಾಜೇಶ್ ರೈಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.