ಬಜ್ಪೆ: ಮೇಯಲು ಬಿಟ್ಟ ಗೋವುಗಳನ್ನು ಕಳವುಗೈದ ಇಬ್ಬರು ಆರೋಪಿಗಳು ಅರೆಸ್ಟ್
Saturday, March 18, 2023
ಮಂಗಳೂರು: ನಗರದ ಬಜ್ಪೆ ಠಾಣಾ ವ್ಯಾಪ್ತಿಯ ತೆಂಕ ಎಕ್ಕಾರು ಎಂಬಲ್ಲಿ ಮೇಯಲು ಕಟ್ಟಿಹಾಕಿದ 2ದನಗಳನ್ನು ಕಳವುಗೈದ ಇಬ್ಬರು ಆರೋಪಿಗಳನ್ನು ದನಗಳ ಸಹಿತ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಜ್ಪೆ ಭಟ್ರಕೆರೆ ನಿವಾಸಿ ಮೊಹಮ್ಮದ್ ಸೈಫುದ್ದಿನ್(19) ಮತ್ತು ಬಜ್ಪೆ ಪೊರ್ಕೊಡಿ ನಿವಾಸಿ ಅಬ್ದುಲ್ ರಜಾಕ್ ಅಲಿಯಾಸ್ ಫಾಜೀಲ್ (19) ಬಂಧಿತ ಆರೋಪಿಗಳು.
ಮಾ.17ರಂದು ಬೆಳಗ್ಗೆ 8ಗಂಟೆಗೆ ತೆಂಕ ಎಕ್ಕಾರು ಎಂಬಲ್ಲಿ ಮೇಯಲು ಕಟ್ಟಿ ಹಾಕಿರುವ 2 ದನಗಳನ್ನು ಗೋಕಳ್ಳರು ಕಳವುಗೈದಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದನದ ಮಾಲಿಕರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿರುವ ಪೊಲೀಸರು ದನಗಳು ಮತ್ತು ಆರೋಪಿಗಳ ಪತ್ತೆಗೆ ತನಿಖೆ ನಡೆಸಿದ್ದರು. ಅದರಂತೆ ಪೊಲೀಸ್ ನಿರೀಕ್ಷಕ ಪ್ರಕಾಶ್ ಹಾಗೂ ತಂಡ ಮಾ18ರಂದು 12ಗಂಟೆಗೆ ಕಳುವಾಗಿರುವ 2 ದನಗಳನ್ನು ಹಾಗು ಕಳವು ಆರೋಪಿಗಳಿಬ್ಬರನ್ನು ದಸ್ತಗಿರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಮಾರ್ಗದರ್ಶನದಂತೆ, ಡಿಸಿಪಿಗಳಾದ ಅಂಶು ಕುಮಾರ್ ಮತ್ತು ದಿನೇಶ್ ಕುಮಾರ್ ರವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಹಾಗೂ ಬಜಪೆ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ರವರ ನೇತೃತ್ವದಲ್ಲಿ ಪಿಎಸ್ಐಗಳಾದ ಪೂವಪ್ಪ, ಗುರು ಕಾಂತಿ, ಎಎಸ್ಐ ರಾಮಣ್ಣ ಪೂಜಾರಿ, ರುಕ್ಮಯ್ಯ, ಸುಜನ್, ರಶೀದ ಶೇಖ, ರಾಜೇಶ್, ಸಂತೋಷ, ರವಿಕುಮಾರ್, ದಯಾನಂದ, ಸಂಜೀವ ಭಜಂತ್ರಿ, ಬಸವರಾಜ್ ಪಾಟೀಲ್, ಉಮೇಶ್ ರವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿರುತ್ತಾರೆ.