-->
ಇಂತಹ ತಪ್ಪುಗಳನ್ನು ಮಾಡುವವರ ಮನೆಯಲ್ಲಿ ಎಂದಿಗೂ ಲಕ್ಷ್ಮಿ  ನೆಲೆಸುವುದಿಲ್ಲ..! GOD LAXMI

ಇಂತಹ ತಪ್ಪುಗಳನ್ನು ಮಾಡುವವರ ಮನೆಯಲ್ಲಿ ಎಂದಿಗೂ ಲಕ್ಷ್ಮಿ ನೆಲೆಸುವುದಿಲ್ಲ..! GOD LAXMI


​ 
ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಯಾವ ವ್ಯಕ್ತಿಯ ಮನೆಯಲ್ಲಿ ಶುಚಿತ್ವ ಇರುವುದಿಲ್ಲವೋ ಅಂತಹ ಮನೆಗಳಲ್ಲಿ ಲಕ್ಷ್ಮಿ ದೇವಿಯು ನೆಲೆಸುವುದಿಲ್ಲ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಈ ಕಾರಣಕ್ಕಾಗಿ ಮನೆಯನ್ನು ಅದಷ್ಟು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. 


ಅಡುಗೆ ಮನೆಯ ಸ್ವಚ್ಛತೆ

ಬೆಳಗ್ಗೆ ನೀವು ದೇವರ ಪೂಜೆಯನ್ನು ಮಾಡುವ ಮುನ್ನ ಸ್ನಾನವನ್ನು ಮಾಡಿ ಶುದ್ಧರಾಗಬೇಕು. ಹಾಗೇ ರಾತ್ರಿ ನೀವು ಊಟ ಮಾಡಿ ಮಲಗುವ ಮುನ್ನ ಊಟ ಮಾಡಿದ ಪಾತ್ರೆಗಳನ್ನು, ಅಡುಗೆ ಮನೆಯನ್ನು ಸ್ವಚ್ಛವಾಗಿರಿಸಬೇಕು. ತಿಂದ ಪಾತ್ರೆಗಳನ್ನು ತೊಳೆಯದೆ ಹಾಗೇ ಇಡುವುದು ಮನೆಗೆ ದುರಾದೃಷ್ಟವನ್ನು ಆಹ್ವಾನಿಸುತ್ತದೆ. 

ಅತಿಯಾದ ಕೋಪ

ಪ್ರತಿ ವಿಷಯಕ್ಕೂ ಕೂಗಾಡುವ ಇಂಥವರು ಹೆಂಡತಿ ಮಕ್ಕಳ ಮೇಲೆ ಯಾವಾಗಲೂ ಕೋಪ ಮಾಡಿಕೊಳ್ಳುತ್ತಾರೆ. ಅಂತವರ ಮನೆಯ ಬಡತನಕ್ಕೆ ಆ ವ್ಯಕ್ತಿಯ ನಡವಳಿಕೆಯೇ ಮುಖ್ಯ ಕಾರಣವಾಗುತ್ತದೆ.



ಉಗುರು ಕಚ್ಚುವ ಅಭ್ಯಾಸ

ಅನೇಕ ಜನರು ಯಾವಾಗಲೂ ತಮ್ಮ ಹಲ್ಲುಗಳನ್ನು ಕಚ್ಚುವ ಕೆಟ್ಟ ಅಭ್ಯಾಸವನ್ನು, ಉಗುರುಗಳನ್ನು ಕಡಿಯುವ ಕೆಟ್ಟ ಅಭ್ಯಾಸವನ್ನು ಹೊಂದಿರುತ್ತಾರೆ. ನಿಮಗೂ ಇಂತಹ ಅಭ್ಯಾಸಗಳಿದ್ದರೆ ತಕ್ಷಣ ಬಿಟ್ಟುಬಿಡಿ. ಇಂತಹ ಅಭ್ಯಾಸದಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತದೆ. 

ಕಾಲು ಎಳೆದು ನಡೆಯುವ ಅಭ್ಯಾಸ

ಪಾದಗಳನ್ನು ಎಳೆಯುವ ಅಭ್ಯಾಸವನ್ನು ಸಹ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಕಾಲು ಎಳೆದುಕೊಂಡು ನಡೆಯುವ ಇಂಥವರು ಜೀವನದಲ್ಲಿ ಎಂದೂ ಪ್ರಗತಿ ಸಾಧಿಸಲಾರರು. ಹೆಚ್ಚಿನವರಲ್ಲಿ ನಾವು ಈ ಕೆಟ್ಟ ಅಭ್ಯಾಸವನ್ನು ನೋಡಬಹುದು. ಅಂತವರು ಕಾಲು ಎಳೆದುಕೊಂಡು ನಡೆಯುತ್ತಾರೆ. 


Ads on article

Advertise in articles 1

advertising articles 2

Advertise under the article