ತಲೆ ಕೂದಲು ಉದುರುವಿಕೆಯನ್ನು ತಡೆಯಲು ಇಲ್ಲಿದೆ ನೋಡಿ ಮನೆಮದ್ದುಗಳ! HAIR FALL
Friday, March 3, 2023
ತಲೆ ಕೂದಲು ಉದುರುವಿಕೆಯನ್ನು ತಡೆಯುವುದರಿಂದ ಹಿಡಿದು ಕೂದಲಿಗೆ ಉತ್ತಮ ಹೊಳಪು ನೀಡುವಲ್ಲಿ ಇದರ ಪಾತ್ರ ತುಂಬಾ ದೊಡ್ಡದು.
ಮುಖ್ಯವಾಗಿ ತಲೆ ಕೂದಲಿನ ಭಾಗದಲ್ಲಿ ಕಲ್ಮಶಗಳನ್ನು ದೂರ ಮಾಡಿ ನೆತ್ತಿಯನ್ನು ಆರೋಗ್ಯಕರವಾಗಿ ಇರಿಸುತ್ತದೆ.
ಇದಕ್ಕಾಗಿ ನೀವು ನೀರಿನಲ್ಲಿ 20 ನಿಮಿಷಗಳ ಕಾಲ ಕೆಲವು ದಾಸವಾಳ ಹೂಗಳನ್ನು ಚೆನ್ನಾಗಿ ಕುದಿಸಿ, ತಣ್ಣಗಾಗಿಸಿ ಅದೇ ನೀರಿನ ಜೊತೆ ದಾಸವಾಳ ಹೂಗಳ ಪೇಸ್ಟ್ ತಯಾರಿಸಿ ಅದನ್ನು ನಿಮ್ಮ ತಲೆ ಕೂದಲಿಗೆ ಹಚ್ಚಿ.
ಹೀರೆಕಾಯಿ
ಹೀರೆಕಾಯಿ ಕೂಡ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆ ಯನ್ನು ತಡೆಯುತ್ತದೆ ಎಂದು ಹೇಳುತ್ತಾರೆ. ಮುಖ್ಯವಾಗಿ ಕಳೆದು ಹೋದ ಪಿಗ್ಮೆಂಟ್ ಗಳನ್ನು ವಾಪಸ್ ತಂದು ತಲೆ ಕೂದಲಿನ ಬೇರು ಗಳನ್ನು ಸದೃಢಪಡಿಸುತ್ತದೆ.
ನೀವು ಇದಕ್ಕಾಗಿ ಹೀರೆಕಾಯಿ ಹೋಳುಗಳನ್ನು ನೆರಳಿ ನಲ್ಲಿ ಒಣಗಿ ಹಾಕಬೇಕು. ನಂತರ ಇವುಗಳನ್ನು ತೆಂಗಿನ ಎಣ್ಣೆಯಲ್ಲಿ ಮೂರು ದಿನಗಳ ಕಾಲ ನೆನೆ ಹಾಕಬೇಕು.
ಇದೇ ಹೀರೆಕಾಯಿ ಮಿಶ್ರಿತ ತೆಂಗಿನ ಎಣ್ಣೆಯನ್ನು ಕಡಿಮೆ ಉರಿಯಲ್ಲಿ ಎಣ್ಣೆ ಕಪ್ಪು ಬಣ್ಣಕ್ಕೆ ಬರುವವರೆಗೆ ಸ್ಟೌ ಮೇಲೆ ಕಾಯಿಸಬೇಕು. ನಂತರ ಇದನ್ನು ಸೋಸಿಕೊಂಡು ವಾರ ದಲ್ಲಿ ಎರಡರಿಂದ ಮೂರು ಬಾರಿ ತಲೆ ಕೂದಲಿಗೆ ಹಚ್ಚಬೇಕು.
ಹರಿವೆ ಸೊಪ್ಪು
ತಲೆಕೂದಲು ಅರ್ಧಕ್ಕೆ ಮುರಿದು ಬೀಳುವುದು, ತಲೆ ಕೂದಲಿನ ಬಣ್ಣ ಚಿಕ್ಕ ವಯಸ್ಸಿಗೆ ಬಿಳಿ ಬಣ್ಣಕ್ಕೆ ತಿರುಗು ವುದು, ಇವೆಲ್ಲವೂ ಒಳ್ಳೆಯ ಆರೋಗ್ಯಕರ ತಲೆ ಕೂದಲಿನ ಲಕ್ಷಣವಲ್ಲ.
ಆದರೆ ಇಂತಹ ತೊಂದರೆಗಳನ್ನು ಬಹಳ ಸುಲಭವಾಗಿ ಅಮರ ನಾಥ್ ರಸದ ಮೂಲಕ ದೂರ ಮಾಡ ಬಹುದು. ನೀರಿನಲ್ಲಿ ಅಮರನಾಥ್ ರಸ ಮಿಶ್ರಣ ಮಾಡಿ ಅದನ್ನು ತಲೆಕೂದಲಿಗೆ ಹಚ್ಚಬೇಕು.
ಕ್ಯಾರೆಟ್ ಮತ್ತು ಎಳ್ಳು
ತಲೆ ಕೂದಲಿನ ಆರೋಗ್ಯಕ್ಕೆ ಇದು ಬೆಸ್ಟ್ ಕಾಂಬಿನೇಷನ್ ಎಂಬುದು ತಜ್ಞರ ಅಭಿಪ್ರಾಯ. ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ಇದು ತಡೆಯುತ್ತದೆ.
ಇದಕ್ಕಾಗಿ ನೀವು ಎಳ್ಳೆಣ್ಣೆ ಮತ್ತು ಕ್ಯಾರೆಟ್ ರಸವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಚಮಚ ಮೆಂತ್ಯ ಪುಡಿಯನ್ನು ಸೇರಿಸಬೇಕು.
ಇದನ್ನು 20 ದಿನಗಳ ಕಾಲ ಸೂರ್ಯನ ಬಿಸಿಲಿನಲ್ಲಿ ಇಟ್ಟು ಆನಂತರ ಅದನ್ನು ತಲೆ ಕೂದಲಿಗೆ ಮತ್ತು ನೆತ್ತಿಯ ಭಾಗಕ್ಕೆ ಹಾಕಿ ಚೆನ್ನಾಗಿ ಮಸಾಜ್ ಮಾಡಬೇಕು.