-->
kadaba:-ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರಿಂದ ಕಡಬ ಪ್ರೆಸ್ ಕ್ಲಬ್‌ಗೆ ಇಸಿಜಿ ಯಂತ್ರ ಹಸ್ತಾಂತರ.

kadaba:-ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರಿಂದ ಕಡಬ ಪ್ರೆಸ್ ಕ್ಲಬ್‌ಗೆ ಇಸಿಜಿ ಯಂತ್ರ ಹಸ್ತಾಂತರ.

ಕಡಬ

ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಕುಡ್ಲ ಕುದ್ರು ಪ್ಯಾರಡೈಸ್ ಐಲ್ಯಾಂಡ್ ನಲ್ಲಿ ಭಾನುವಾರದಂದು ನಡೆದ ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಖ್ಯಾತ ಹೃದ್ರೋಗ ತಜ್ಞರಾದ  ಡಾ. ಪದ್ಮನಾಭ ಕಾಮತ್ ಅವರು ಕಡಬ ಪ್ರೆಸ್ ಕ್ಲಬ್ ಗೆ ಇಸಿಜಿ ಯಂತ್ರವನ್ನು ಹಸ್ತಾಂತರ ಮಾಡಿದರು.

ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ., ಕಾರ್ಯದರ್ಶಿ ವಿಜಯ ಕುಮಾರ್ ಇಸಿಜಿ ಯಂತ್ರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಖ್ಯಾತ ಚಿತ್ರನಟ, ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಕೆ.ಸದಾಶಿವ ಶೆಣೈ, ಬೀಡಾಡಿ ನಾಯಿಗಳ ಪೋಷಕಿ ಶ್ರೀಮತಿ ರಜನಿ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅಣ್ಣು ಮಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ದ.ಕ. ಜಿಲ್ಲಾ ಹಿರಿಯ ಸಹಾಯಕ‌ ನಿರ್ದೇಶಕ ರವಿರಾಜ್‌ ಎಚ್.ಜಿ., ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷರಾದ ರಾಮಕೃಷ್ಣ ಆರ್., ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯ ಪಿ.ಬಿ.ಹರೀಶ್ ರೈ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article