-->
kadaba:- ಪಶುವೈದ್ಯಕೀಯ ಕಾಲೇಜು, ಕಟ್ಟಡ , ಕಡಬ ತಾಲೂಕು ಮಿನಿವಿಧಾನ ಸೌಧ,  ಕಡಬ ತಾಲೂಕು ಪಂಚಾಯಿತಿ ಕಟ್ಟಡಗಳ ಉದ್ಘಾಟನೆ.

kadaba:- ಪಶುವೈದ್ಯಕೀಯ ಕಾಲೇಜು, ಕಟ್ಟಡ , ಕಡಬ ತಾಲೂಕು ಮಿನಿವಿಧಾನ ಸೌಧ, ಕಡಬ ತಾಲೂಕು ಪಂಚಾಯಿತಿ ಕಟ್ಟಡಗಳ ಉದ್ಘಾಟನೆ.

ಕಡಬ

ಬಿಜೆಪಿ ಅಧಿಕಾರ ಬಂದ ಬಳಿಕ ಜನರ ಬೇಡಿಕೆಗೆ  ಅನುಗುಣವಾಗಿ ಅನುದಾನಗಳನ್ನು ನೀಡಿ ಕಾರ್ಯನುಷ್ಠಾನಗೊಳಿಸಿದ್ದರಿಂದ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಮೂಡುವಂತಾಗಿದೆ. ವಿರೋಧಿಗಳ ಟೀಕೆಗಳನ್ನು ಸವಲಾಗಿ ಸ್ವೀಕರಿಸಿ ಹೋಣೆಗಾರಿಕೆಯಿಂದ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಲಾಗಿದೆ ಎಂದು ಬಂದರು, ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕಾ ಸಚಿವರಾದ ಎಸ್. ಅಂಗಾರ ಹೇಳಿದರು.

ಅವರು ಶುಕ್ರವಾರ ಕಡಬ ತಾಲೂಕು ಆಡಳಿತ ಸೌಧ, ಕಡಬ ತಾಲೂಕು ಪಂಚಾಯಿತಿ ಕಟ್ಟಡ ಹಾಗೂ ಕೊಯಿಲ ಪಶು ವೈದ್ಯಕೀಯ ಕಾಲೇಜು ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಕಡಬ ಪಂಚಾಯಿತಿ ಕಟ್ಟಡದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಈ ಹಿಂದೆ ಅಧಿಕಾರ ನಡೆಸಿದ ಸರ್ಕಾರಗಲ್ಲಿ ಅಭಿವೃದ್ದಿ ದೃಷ್ಟಿಕೋನವಿರಲಿಲ್ಲ. ಹಾಗಾಗಿ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಿತ್ತು. ಬಿಜೆಪಿ ಸರ್ಕಾರದ ಜನಪರ ಕೆಲಸಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ವಿಶ್ವಾಸ ಹೆಚ್ಚಾದಂತೆ ಬೇಡಿಕೆಗಳು ಹೆಚ್ಚಾಗಿದೆ. ಕಾಲ ಕಾಲಕ್ಕೆ ಅನುಗುಣವಾಗಿ ಎಲ್ಲವನ್ನೂ ಪೂರೈಸಲಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸೇತುವೆ , ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಪ್ರಥಮ ಆಧ್ಯತೆ ನೀಡಿ ಯೋಜನೆಗಳನ್ನು ರೂಪಿಸಿಕೊಂಡು  ಕಾಮಗಾರಿ ಮುಗಿಸಲಾಗಿದೆ. ರಾಜ್ಯದಲ್ಲಿ ಹೊಸದಾಗಿ ರಚನೆಗೊಂಡ ೫೦ ತಾಲೂಕು ಪಂಚಾಯಿತಿಗಳ ಪೈಕಿ ಕಡಬ ತಾಲೂಕು ಪಂಚಾಯಿತಿಗೆ ಮಾತ್ರ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿರುವುದು ನಮ್ಮ ಹೆಗ್ಗಳಿಗೆ ಕ್ಷೇತ್ರದ ಅಭಿವೃದ್ದಿಗೆ ಪ್ರಮಾಣಿಕ ಪ್ರಯತ್ನ ಮಡಿರುವುದು ತೃಪ್ತಿ ನನಗಿದೆ . ಕಂದಾಯ ಇಲಾಖೆಯ ಸೇವೆಗಳು ಒಂದೆ ಸೂರಿನಡಿಯಿದ್ದರೆ ಜನರಿಗೆ ಅನುಕೂಲ ಈ ದೃಷ್ಟಿಯಿಂದ ಮಿನಿ ವಿಧಾನ ಸೌದ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ ಎಂದರು.ವಿಧನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಜನರು ಕೊಟ್ಟ ಜವಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದೆ . ಅಭಿವೃದ್ದಿ ವೇಗ ಪಡೆದುಕೊಂಡಿದೆ. ಬದಲಾದ ಕಾಲಘಟ್ಟದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ ಇದಕ್ಕೆ ತಕ್ಕಂತೆ ಸರ್ಕಾರ ಯೋಜನೆ ರೂಪಿಸಿಕೊಂಡು ಕಾರ್ಯನುಷ್ಠಾನ ಮಾಡುತ್ತಿದೆ ಎಂದರು.
ಜಿಲ್ಲಾ ಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್ ಮಾತನಾಡಿ,  ಅಧಿಕಾರಿಗಳು ಜನರ ಸುತ್ತ ಇರಬೇಕು ಜನರು ಅಧಿಕಾರಿಗಳ ಸುತ್ತ್ತ ಸುತ್ತುವುದನ್ನು ತಪ್ಪಿಸಲು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಂತಹ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಇದರಿಂದ ಜನರಿಗೆ ಬಹಲಷ್ಟು ಉಪಕಾರಿಯಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಕಂದಾಯ ಇಲಾಖೆ ಜನರ ಜೀವನದಲ್ಲಿ ಅತ್ಯಂತ ಹೆಚ್ಚಿನ ಸೇವೆ ನೀಡುವ ಇಲಾಖೆಯಾಗಿದೆ. ಇಂತಹ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ಹಹಿಸಲು ಕಟ್ಟಡಗಳ ಅವಶ್ಯಕತೆಯಿರುತ್ತದೆ ಅಂತೆಯೇ ಕಡಬದಲ್ಲಿ ಕಂದಾಯ, ತಾಲೂಕು ಪಂಚಾಯತಿಗೆ  ಸುಸಜ್ಜಿತ ಕಟ್ಟಡಗಳ ನಿರ್ಮಾಣದಿಂದ ಸಂತುಷ್ಟಿಯಿಂದ ಜನರಿಗೆ ಸೇವೆ ನೀಡಲು ಅನುಕೂಲಕರವಾಗಿದೆ ಎಂದರು. 
ಬೀದರ್ ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ  ಕುಲಪತಿ ಡಾ.ಕೆ ಸಿ ವೀರಣ್ಣ, ಪಶುಪಾಲನ ಮತ್ತು ಪಶುವೈದ್ಯಕೀಯ ಉಪನಿರ್ದೆಶಕ ಡಾ. ಅರುಣ್ ಕುಮಾರ್ ಶೆಟ್ಟಿ ಶುಭಹಾರೈಸಿದರು. 

ಮೀನುಗಾರಿಕ ಅಭಿವೃದ್ದಿ ನಿಗಮ ಅಧ್ಯಕ್ಷ ಎ ವಿ ತೀರ್ಥರಾಮ,  ಕರ್ನಾಟಕ ಗೃಹ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯ ಕುಮಾರ್, ಜಿಲ್ಲಾ ಪಂಚಾಯಿತಿ  ಸಹಾಯಕ ಕಾರ್ಯಪಾಲಕ  ಅಭಿಯಂತರ ಭರತ್ ಬಿ ಎಂ, ಕೊÊಲ ಪಶುವೈದ್ಯಕೀಯ ಕಾಲೇಜು ಡೀನ್ ಡಾ. ರಂಗನಾಥ್, ಸುಳ್ಯ ತಹಶೀಲ್ದಾರ ಮಂಜುನಾಥ, ಕಡಬ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಪಕೀರ ಮೂಲ್ಯ, ಪಶುವೈದ್ಯಕೀಯ ಕಾರ್ಯಪಾಲಕ ಅಭಿಯಂತರ ದಾಮೋದರ, ಕಡಬ ಉಪತಹಸೀಲ್ದಾರ ಮನೋಹರ್ ಕೆ ಟಿ,  ಮೊದಲಾದವರು ಇದ್ದರು. ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಸವಲತ್ತುಗಳ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ನಡೆಯಿತು. ಕಟ್ಟಡ ಕಾಮಗಾರಿಯ ಗುತ್ತಿಗೆದಾರರನ್ನು , ಸಚಿವ ಎಸ್ ಅಂಗಾರ , ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.  ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಪ್ರಸ್ತಾವಿಸಿ ಸ್ವಾಗತಿಸಿದರು. ಉಪತಹಸೀಲ್ದಾರ ಗೋಪಾಲ ಕಲ್ಲುಗುಡ್ಡೆ ವಂದಿಸಿದರು. ಪತ್ರಕರ್ತ ನಾಗರಾಜ್ ಎನ್ ಕೆ ಮತ್ತು ಶಿಕ್ಷಕ ಪ್ರಶಾಂತ ಅನಂತಾಡಿ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article