ಗಮನಿಸಿ- ಮಂಗಳೂರಿನ ಕಂಕನಾಡಿ ( KANKANADI) ಯಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ
Sunday, March 12, 2023
ಮಂಗಳೂರು ನಗರ ಕಂಕನಾಡಿ ಪ್ರದೇಶದ ಕಂಕನಾಡಿ ವೃತ್ತದಲ್ಲಿನ ವಾಹನ ಸಂಚಾರ ಸಮಸ್ಯೆಯ ನಿವಾರಣೆಗಾಗಿ ಈ ಕೆಳಕಂಡಂತೆ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ.
1. Falnir ಕಡೆಯಿಂದ Pumpwell ಕಡೆಗೆ ಹೋಗುವ ಎಲ್ಲಾ ತರಹದ ವಾಹನಗಳ ಸವಾರರು ಕಂಕನಾಡಿ ವೃತ್ತದಲ್ಲಿ ಎಡಕ್ಕೆ ತಿರುಗಿ ಕರಾವಳಿ ವೃತ್ತದಲ್ಲಿ ಬಲಕ್ಕೆ ತಿರುಗಿ ಮುಂದಕ್ಕೆ ಹೋಗುವುದು.
2. Falnir ಕಡೆಯಿಂದ Valencia ಕಡೆಗೆ ಹೋಗುವ ಎಲ್ಲಾ ತರಹದ ವಾಹನ ಸವಾರರು ಕಂಕನಾಡಿ ವೃತ್ತದಲ್ಲಿ ಎಡಕ್ಕೆ ತಿರುಗಿ ಕರಾವಳಿ ವೃತ್ತದಲ್ಲಿ U turn ಪಡೆದು ಮುಂದಕ್ಕೆ ಹೋಗುವುದು.
3. Falnir ಕಡೆಯಿಂದ ಮಂಗಳಾದೇವಿ ಕಡೆಗೆ ಹೋಗುವ ವಾಹನ ಸವಾರರು Sturrock ರಸ್ತೆ, ನಂದಿಗುಡ್ಡ ರಸ್ತೆ ಮುಖಾಂತರ ಕೋಟಿ ಚೆನ್ನಯ್ಯ ವೃತ್ತವನ್ನು ಬಳಸಿ ಹೋಗುವುದು.