ಯುವತಿಗೆ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ಮದುವೆಯನ್ನು ಮುರಿದ ವರ
Tuesday, March 14, 2023
ಉತ್ತರಪ್ರದೇಶ: ಇತ್ತೀಚಿಗೆ ಸಣ್ಣ ಸಣ್ಣ ಕಾರಣಗಳಿಗೂ ವಿವಾಹ ಸಂಬಂಧ ಮುರಿದುಕೊಳ್ಳುವ ಎಷ್ಟೋ ಉದಾಹರಣೆಗಳನ್ನು ನಾವು ನೋಡುತ್ತಿದ್ದೇವೆ. ಇದೀಗ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಯುವತಿಯನ್ನು ಮದುವೆಯಾಗೋದಿಲ್ಲ ಎಂದು ವರ ರಿಜೆಕ್ಟ್ ಮಾಡಿರುವ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಬಾಗವಾನಾ ಗ್ರಾಮದ ಸೋನು ಎಂಬಾತನಿಗೆ ಯುವತಿಯೊಬ್ಬಳೊಂದೆ ವಿವಾಹ ನಿಶ್ಚಯವಾಗಿತ್ತು. ಎರಡೂ ಮನೆಯಲ್ಲಿ ಮದುವೆ ತಯಾರಿಯಲ್ಲಿದ್ದರು. ಆದರೆ ಈ ಯುವತಿಗೆ ಪಿಯುಸಿಯಲ್ಲಿ ಅಂಕ ಕಡಿಮೆ ಬಂದಿದೆ. ಆದ್ದರಿಂದ ಹುಡುಗಿಯನ್ನು ಮದುವೆಯಾಗೋದಿಲ್ಲ ಎಂದು ಸೋನು ರಿಜೆಕ್ಟ್ ಮಾಡಿದ್ದಾನೆ. ಅಲ್ಲದೆ ವರದಕ್ಷಿಣೆ ನೀಡದ ಹಿನ್ನೆಲೆ ಏಕಾಏಕಿ ಮದುವೆ ರದ್ದುಮಾಡಿದ್ದು, ಕ್ಷುಲ್ಲಕ ಕಾರಣ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ವರನ ಕುಟುಂಬದ ವಿರುದ್ಧ ಎಫ್‌ಐಆ ದಾಖಲಿಸಿದ್ದಾರೆ.
ಮದುವೆಗೆಂದು ಬಂಗಾರ ನೀಡಿ, ಮದುವೆಯ ದಿನಾಂಕವನ್ನು ನಿಶ್ಚಯ ಮಾಡಲಾಗಿತ್ತು, ವರದಕ್ಷಿಣೆ ನೀಡೋದಕ್ಕೆ ವಧು ಕುಟುಂಬ ನಿರಾಕರಿಸಿತ್ತು. ಆದ್ದರಿಂದ ಇದೆ ಕಾರಣಕ್ಕೆ ಮದುವೆಯನ್ನು ನಿಲ್ಲಿಸಲಾಗಿದೆ ಎನ್ನಲಾಗಿದೆ.