ನೂರಕ್ಕೂ ಅಧಿಕ ಬಾರಿ ಇರಿದು ಯುವಕನ ಬರ್ಬರ ಹತ್ಯೆ: ತಿಂಗಳ ಹಿಂದಷ್ಟೇ ಮದುವೆಯಾದಾತ ಬಾರದ ಲೋಕಕ್ಕೆ ಪ್ರಯಾಣಿಸಿದ
ಪಾಟ್ನಾ: ನೂರಕ್ಕೂ ಅಧಿಕ ಬಾರಿ ಇರಿದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಕೃತ್ಯವೊಂದು ಬಿಹಾರದಲ್ಲಿ ನಡೆದಿದೆ.
ಚಿಂಟು(20) ಎಂಬ ಯುವಕನೇ ಬರ್ಬರವಾಗಿ ಹತ್ಯೆಗೊಳಗಾದ ಯುವಕ. ಚಿಂಟುವಿನ ಮುಖ ಹಾಗೂ ದೇಹದ ಮೇಲೆ ಚಾಕುವಿನಿಂದ ಇರಿದಿರುವ ಗುರುತುಗಳಿವೆ. ಮೃತದೇಹ ಪೊದೆಯೊಂದರಲ್ಲಿ ಪತ್ತೆಯಾಗಿದೆ.
ಕಳೆದ ಒಂದು ವಾರದಿಂದ ಚಿಂಟು ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ಮನೆಯವರು ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿ ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ ಪೊದೆಯೊಂದರಲ್ಲಿ ಆತ ಮೃತದೇಹವಾಗಿ ಪತ್ತೆಯಾಗಿದ್ದಾನೆ.
ಕೆಲವು ದಿನಗಳ ಹಿಂದೆ ಚಿಂಟು ಹಾಗೂ ನೆರೆಮನೆಯ ರಾಮ ಮಹತೋ ಎಂಬಾತನ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ವಾಗ್ವಾದ ನಡೆದಿದೆ. ಆದ್ದರಿಂದ ಆತನೇ ಕೊಲೆ ಮಾಡಿದ್ದಾನೆ ಎಂದು ಚಿಂಟು ಸಹೋದರ ಗಂಭೀರ ಆರೋಪ ಮಾಡಿದ್ದಾರೆ. ಸ್ಕ್ಯಾಪ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ ಚಿಂಟುವಿಗೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಸದ್ಯ ಮೃತನ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ರಾಮ ಮಹತೋನನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಿಂಟುವನ್ನು 100ಕ್ಕೂ ಅಧಿಕ ಬಾರಿ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.