ಯುಗಾದಿ ಹಬ್ಬದ ಮಾಂಸದೂಟ- ಹಲಾಲ್ ಕಟ್ ಬಹಿಷ್ಕರಿಸಲು ಮತ್ತೆ ಮುತಾಲಿಕ್ ಕರೆ
Monday, March 20, 2023
ಮಂಗಳೂರು: ಕಳೆದ ಬಾರಿ ಯುಗಾದಿಯಂತೆ ಈ ಬಾರಿಯೂ ಜಟ್ಕಾ ಕಟ್ ಮುಂದುವರಿಸಿ - ಹಲಾಲ್ ಕಟ್ ಬಹಿಷ್ಕರಿಸಿ ಅಭಿಯಾನ ನಡೆಸುತ್ತೇವೆ ಎಂದು ಪ್ರಮೋದ್ ಮೊತಾಲಿಕ್ ಹೇಳಿದರು.
ಕಳೆದ ಬಾರಿಯ ಯುಗಾದಿಯ ವೇಳೆಗೆ ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ ಮಾಡಿದ್ದೆವು. ಈ ಬಾರಿಯೂ ಅಭಿಯಾನವನ್ನು ಮುಂದುವರಿಸುತ್ತಿದ್ದೇವೆ. ಹಲಾಲ್ ಕಟ್ ಇಸ್ಲಾಂಗೆ ಸಂಬಂಧಿಸಿದ್ದು ಹೊರತು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಮುಸ್ಲಿಮರು ಹಿಂದೂಗಳ ಜಟ್ಕಾಕಟ್ ಮಾಡಿರುವ ಮಾಂಸವನ್ನು ತಿನ್ನೋದಿಲ್ಲ. ಹಾಗಾದರೆ ನಾವೇಕೆ ಅವರ ಹಲಾಲ್ ಮಾಂಸವನ್ನು ತಿನ್ನಬೇಕು ಎಂದರು.
ಹಲಾಲ್ ಕಟ್ ನಿಂದ ಜಲಾಮ್-ಉಲೇಮಾ ಟ್ರಸ್ಟ್ ಗೆ ಎರಡು ಲಕ್ಷ ಕೋಟಿ ರೂ. ಆದಾಯವಿದೆ. ಈ ಹಲಾಲ್ ನ ದುಡ್ಡು ಟೆರರಿಸ್ಟ್ ಗಳಿಗೆ ಸಂದಾಯವಾಗುತ್ತದೆ. ಮಂಡ್ಯದಲ್ಲಿ ಹಿಜಾಬ್ ಪ್ರತಿಭಟನೆ ವೇಳೆ 'ಅಲ್ಲಾಹು ಅಕ್ಬರ್' ಎಂದು ಕೂಗಿದ ವಿದ್ಯಾರ್ಥಿನಿಗೆ ಇದೇ ಟ್ರಸ್ಟ್ ಐದು ಲಕ್ಷ ರೂ. ನೀಡಿದೆ. ರಾಜ್ಯದಲ್ಲಿ ನಡೆದಿರುವ ಹಲವು ಗಲಭೆಯ ಹಿಂದೆ ಹಲಾಲ್ ನ ಹಣವಿದೆ. ಹಲಾಲ್ ಸೇವಿಸಿ ಹಿಂದೂಗಳ ವಿರುದ್ಧ ಹಿಂದೂಗಳೇ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಪ್ರಮೋದ್ ಮೊತಾಲಿಕ್ ಹೇಳಿದರು.