ಬಾಯಿಗೆ ಹಗ್ಗ ಕಟ್ಟಿರುವ ಸ್ಥಿತಿಯಲ್ಲಿ ಮೊಸಳೆ ಪತ್ತೆ: ಆಹಾರ ಸೇವಿಸಲಾಗದೆ ನದಿಯಿಂದ ಹೆದ್ದಾರಿಗೆ ಎಂಟ್ರಿ
Saturday, March 4, 2023
ವಿಜಯಪುರ: ಮೊಸಳೆಯೊಂದು ಬಾಯಿಗೆ ಹಗ್ಗ ಕಟ್ಟಿರುವ ಸ್ಥಿತಿಯಲ್ಲಿ ಕೊಲ್ಲಾರ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಶನಿವಾರ ಪತ್ತೆಯಾಗಿದೆ.
ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ಈ ಮೊಸಳೆ ಕಂಡು ಬಂದಿದೆ. ಮೊಸಳೆಯನ್ನು ನೋಡಿದ ಸಾರ್ವಜನಿಕರು ಗಾಬರಿಗೊಂಡಿದ್ದಾರೆ. ಯಾವುದೋ ಜನವಸತಿಗೆ ನುಗ್ಗಿರುವ ಮೊಸಳೆಯ ಬಾಯಿಗೆ ಹಗ್ಗ ಕಟ್ಟಿ ಕೃಷ್ಣಾ ನದಿ ಬಳಿ ಬಿಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಬಾಯಿಗೆ ಹಗ್ಗ ಕಟ್ಟಿರುವ ಕಾರಣ ಆಹಾರ ಸೇವಿಸಲಾಗದೆ ನದಿಯಾಚೆ ಬಂದಿರುವ ಮೊಸಳೆಯನ್ನು ರಕ್ಷಿಸಲು ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದಾರೆ.