ಕರ್ತವ್ಯದಲ್ಲಿದ್ದ ಪೊಲೀಸ್ ಗೆ ಸೆಲ್ಯೂಟ್ ಮಾಡಿದ ಪುಟ್ಟ ಬಾಲಕಿ: ವೀಡಿಯೋ ಶೇರ್ ಮಾಡಿದ ಕೇರಳ ಪೊಲೀಸ್ ಇಲಾಖೆ
Wednesday, March 22, 2023
ಕೊಚ್ಚಿ: ಕೇರಳ ರಾಜ್ಯದ ಪೊಲೀಸರು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವೀಡಿಯೋ ಸದ್ಯ ಸಾಕಷ್ಟು ವೈರಲ್ ಆಗಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಕರ್ತವ್ಯ ನಿರತ ಪೊಲೀಸರೊಬ್ಬರಿಗೆ ಸೆಲ್ಯೂಟ್ ಮಾಡುವುದನ್ನು ಕಾಣಬಹುದು.
ಕಾರಿನ ಹಿಂಭಾಗದಲ್ಲಿ ನಿಂತಿದ್ದ ಪೊಲೀಸರ ಬಳಿಗೆ ಬಾಲಕಿ ಓಡಿ ಬಂದು ನಗುತ್ತಾ ಸೆಲ್ಯೂಟ್ ಮಾಡಿ ಗೌರವ ಸೂಚಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಅಧಿಕಾರಿಯೂ ನಗುನಗುತ್ತಾ ಸೆಲ್ಯೂಟ್ ಮಾಡುತ್ತಾರೆ. ಈ ವೇಳೆ ಬಾಲಕಿ ಸಂತಸಗೊಳ್ಳುತ್ತಾಳೆ.
ಕೇರಳ ಪೊಲೀಸರು ಹಂಚಿಕೊಂಡಿರುವ ವೀಡಿಯೋವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕ ಮಂದಿ ಗೌರವ ಸೂಚಿಸಿರುವುದನ್ನು ಕೊಂಡಾಡಿದ್ದಾರೆ. ಜತೆಗೆ ಜನರ ರಕ್ಷಣೆಗಾಗಿ ಸದಾ ಸೇವೆಯಲ್ಲಿರುವ ಪೊಲೀಸರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಬಹತೇಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.