ಮಂಗಳೂರು: ಅಸ್ವಾಭಾವಿಕ ಲೈಂಗಿಕ ಕ್ರಿಯೆ - ಸುಲ್ತಾನ್ ಗೋಲ್ಡ್ ಸೇಲ್ಸ್ ಮ್ಯಾನೇಜರ್ ಅರೆಸ್ಟ್
Wednesday, March 8, 2023
ಮಂಗಳೂರು: ಇಚ್ಛೆಗೆ ವಿರುದ್ಥವಾಗಿ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿರುವ ಆರೋಪದಲ್ಲಿ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯ ಕಾಸರಗೋಡು ಮಳಿಗೆಯ ಸೇಲ್ಸ್ ಮ್ಯಾನೇಜರ್ ಅನ್ನು ಮಂಗಳೂರಿನ ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯ ಕಾಸರಗೋಡು ಮಳಿಗೆಯ ಸೇಲ್ಸ್ ಮ್ಯಾನೇಜರ್ ಮಹಮ್ಮದ್ ಕುಂಞಿ(52) ಬಂಧಿತ ಆರೋಪಿ.
ಈತ ಮಂಗಳೂರಿನ 26ವರ್ಷದ ಯುವಕನ ಇಚ್ಛೆಗೆ ವಿರುದ್ಧವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.