ಇನ್ ಸ್ಟಾಗ್ರಾಂ ರೀಲ್ ವೇಳೆ ರಸ್ತೆ ಅಪಘಾತ: ಮಹಿಳೆ ಮೃತ್ಯು, ಯುವಕರಿಬ್ಬರು ಅರೆಸ್ಟ್
Thursday, March 9, 2023
ಪುಣೆ: ಇನ್‌ಸ್ಟಾಗ್ರಾಂ ರೀಲ್‌ಗಾಗಿ ವೀಡಿಯೋ ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಇಬ್ಬರು ಯುವಕರನ್ನು ಅರೆಸ್ಟ್ ಮಾಡಲಾಗಿದೆ.
ಸೋಲಾಪುರ ಜಿಲ್ಲೆಯ ಬರ್ಶಿ ಮೂಲದ ತಸ್ಲಿಮ್ ಫಿರೋಝ್ ಪಠಾಣ್ (31) ಮೃತಪಟ್ಟ ಮಹಿಳೆ. ಇಬ್ಬರೂ ಸಯ್ಯದ್ ನಗರದ ನಿವಾಸಿ ಅಯಾನ್ ಶಹನೂರ್ ಶೇಖ್ (21) ಮತ್ತು ಝದ್ ಜಾವೇದ್ ಶೇಖ್ (22) ಬಂಧಿತರು.
ಪುಣೆಯ ಮುಹಮ್ಮದ್ ವಾಡಿ ಪ್ರದೇಶದ ಕೃಷ್ಣನಗರದ ಪಾಲ್ಸಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಯಾನ್ ಅತ್ಯಂತ ವೇಗದಲ್ಲಿ ಬೈಕ್ ಅನ್ನು ಚಲಾಯಿಸಿದ್ದು, ಹಿಂಬದಿ ಸವಾರ ರೀಲ್ಸ್ ಗೆ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದ. ಅತ್ಯಂತ ವೇಗದಲ್ಲಿ ಹೋಗುತ್ತಿದ್ದ ಇವರ ಬೈಕ್ ಮತ್ತೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಈ ಅಪಘಾತದಲ್ಲಿ ತಸ್ಲಿಂ ಪಠಾಣ್ ಮೃತಪಟ್ಟಿದ್ದಾರೆ. ಪೊಲೀಸರು ಮಂಗಳವಾರ ವನವಾಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.