
Serial Kisser: ಮಹಿಳೆಯರನ್ನು ಅಡ್ಡಗಟ್ಟಿ KISS ಮಾಡುತ್ತಿದ್ದ ಕಿಡಿಗೇಡಿ: ಬಿಹಾರದಲ್ಲಿ 'ಸೀರಿಯಲ್ ಕಿಸ್ಸರ್' ಬಂಧನ
ಪಟನಾ: ಬಿಹಾರದಲ್ಲಿ ರಸ್ತೆಯಲ್ಲಿ ಹೋಗುವ ಮಹಿಳೆಯರನ್ನು ಇದ್ದಕ್ಕಿದ್ದಂತೆ ಅಡ್ಡಗಟ್ಟಿ ಅವರಿಗೆ
ಬಲವಂತವಾಗಿ ಕಿಸ್
ಮಾಡುತ್ತಿದ್ದ ಕಿರಾತಕ 'ಸೀರಿಯಲ್ ಕಿಸ್ಸರ್'ನನ್ನು
ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಅಕ್ರಂ ಬಂಧಿತ ಆರೋಪಿ. ಈತನ ಗ್ಯಾಂಗ್ನಲ್ಲಿ ಇನ್ನೂ ಮೂವರು
ಇದ್ದು ಅವರನ್ನು ಭಾನುವಾರ ಬಂಧಿಸಲಾಗಿದೆ.
ಮಹಿಸೌಧಿ ಗ್ರಾಮದಲ್ಲಿ ಸಿರಿಯಲ್
ಕಿಸ್ಸರ್ ನ ಮೊದಲ ಬಂಧನ ನಡೆದಿದೆ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅಪರಾಧಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ತಂಡವು,
5 ಮಂದಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಅವರನ್ನು
ತನಿಖೆ ನಡೆಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗಳಲ್ಲಿ ಒಬ್ಬಾತ ಮಾರ್ಚ್
10ರಂದು ಜಮುಯಿಯಲ್ಲಿ ಮಹಿಳೆಯನ್ನು ಚುಂಬಿಸಿದ್ದು ತಾನೇ ಎಂದು ಬಾಯಿ
ಬಿಟ್ಟಿದ್ದಾನೆ.
ಜಮುಯಿ ಪಟ್ಟಣದ ಝಾಝಾದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಠಾತ್ತನೆ ಅಡ್ಡಗಟ್ಟಿದ್ದ ಯುವಕ, ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕಿಸ್
ಮಾಡಿ ಪಲಾಯನ ಮಾಡಿದ್ದ. ಆತ ಕೂಡ ಪೊಲೀಸರ ಕೈಗೆ
ಸಿಕ್ಕಿ ಬಿದ್ದಿದ್ದಾನೆ.
ಘಟನೆ ನಡೆದ ಕೂಡಲೇ ಬಾಲಕಿಯು ತನ್ನ ತಂದೆಗೆ ವಿಷಯ ತಿಳಿಸಿದ್ದಳು. ಅವರು ಝಾಝಾ ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ಅವರು ಆರೋಪಿಯನ್ನು ಗುರುತಿಸಿದ್ದರು. ಕೂಡಲೇ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರೂ ಆರೋಪಿಗಳು, ತಾವು ಇನ್ನೂ ಅನೇಕ ಮಹಿಳೆಯರಿಗೆ ಇದೇ ರೀತಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
"ಆತ ಆಸ್ಪತ್ರೆ ಆವರಣದ ಒಳಗೆ ಏಕೆ ಬಂದಿದ್ದ ಎನ್ನುವುದು ನನಗೆ ಗೊತ್ತಿಲ್ಲ. ನನಗೆ ಆ ವ್ಯಕ್ತಿ ಯಾರೆಂದು ಗೊತ್ತಿಲ್ಲ. ನಾನು ಆತನಿಗೆ ಏನು ಮಾಡಿದ್ದೆ? ಆತ ನನ್ನನ್ನು ಹಿಡಿದುಕೊಂಡಾಗ ನಾನು ಪ್ರತಿರೋಧ ತೋರಿದ್ದೆ. ಆಸ್ಪತ್ರೆ ಸಿಬ್ಬಂದಿಯವರನ್ನು ಕರೆದಿದ್ದೆ. ಆತ ಅಷ್ಟರಲ್ಲಾಗಲೇ ಆತ ಓಡಿಹೋಗಿದ್ದನು. ಆಸ್ಪತ್ರೆಗೆ ಕಟ್ಟಿರುವ ಕಂಪೌಂಡ್ ಬಹಳ ಚಿಕ್ಕದಾಗಿದೆ. ಆಸ್ಪತ್ರೆಗೆ ಬರುವ ಮಹಿಳೆಯರ ಸುರಕ್ಷತೆಗಾಗಿ ಅದಕ್ಕೆ ತಂತಿ ಬೇಲಿ ನಿರ್ಮಿಸುವಂತೆ ನಾನು ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ" ಎಂದು ಸಂತ್ರಸ್ತ ಮಹಿಳೆಯು ತಿಳಿಸಿದ್ದಾರೆ.
ಮೊಹಮ್ಮದ್ ಅಕ್ರಂ ಹಾಗೂ ಇತರೆ ಕೆಲವು ಕಿಡಿಗೇಡಿಗಳು ತಮ್ಮದೇ ಗುಂಪು ಹೊಂದಿದ್ದು, ಕಳ್ಳತನದಂತಹ ಕೃತ್ಯದ ಜತೆಗೆ ಇಂತಹ ಕೆಲಸಗಳನ್ನೂ ಮಾಡುತ್ತಿದ್ದರು ಎನ್ನಲಾಗಿದೆ.