ಕಲ್ಲಡ್ಕ: ನೇಣಿಗೆ ಶರಣಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ
Thursday, March 9, 2023
ಕಲ್ಲಡ್ಕ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ಬಾಳ್ತಿಲ ಗ್ರಾಪಂ ಬಳಿಯ ನಿವಾಸಿ ಚಂದ್ರಶೇಖರ್ ಗೌಡ ಮತ್ತು ಸೌಮ್ಯ ದಂಪತಿಯ ಪುತ್ರಿ ವೈಷ್ಣವಿ ಆತ್ಮಹತ್ಯೆ ಮಾಡಿಕೊಂಡ ಶರಣಾದ ವಿದ್ಯಾರ್ಥಿನಿ
ಕಲ್ಲಡ್ಕದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೈಷ್ಣವಿ ಕಾಲೇಜಿಗೆಂದು ಮನೆಯಿಂದ ಹೊರಟಿದ್ದಳು. ಆದರೆ ಏನೋ ಮರೆತು ಹೋಗಿದ್ದೇನೆಂದು ವಾಪಾಸ್ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ. ವೈಷ್ಣವಿ ಭಗವದ್ಗೀತೆಯ 700 ಶ್ಲೋಕವನ್ನು ಕಂಠಪಾಠ ಮಾಡಿ ಜಿಲ್ಲಾ ಪ್ರಶಸ್ತಿಯನ್ನು ಪಡೆದಿದ್ದಳು.