ಇನ್ ಸ್ಟಾಗ್ರಾಂನಲ್ಲಿ ಫಸ್ಟ್ ನೈಟ್ ಬೆಡ್ ರೂಂ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್: ಕಾಲೆಳೆದ ನೆಟ್ಟಿಗರು
Friday, March 3, 2023
ನವದೆಹಲಿ: ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳ ಬಗ್ಗೆ ನಿರ್ಭಿಡೆಯಿಲ್ಲದೆ ಅಭಿಪ್ರಾಯಗಳನ್ನು ತಿಳಿಸುವ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ನಟಿ ಸ್ವರಾ ಭಾಸ್ಕರ್ ಕೂಡ ಒಬ್ಬರು. ಆದ್ದರಿಂದಲೇ ಇವರನ್ನು ವಿರೋಧಿಸುವ ಒಂದು ವರ್ಗವೊಂದು ಇದೆ. ಇತ್ತೀಚೆಗಷ್ಟೇ ಸ್ವರಾ ಭಾಸ್ಕರ್ ತಮ್ಮ ವಿವಾಹದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಗೆ ಸರ್ಪ್ರೈಸ್ ನೀಡಿದ್ದರು.
ಸಮಾಜವಾದಿ ಪಕ್ಷದ ರಾಜ್ಯ ಯುವ ಅಧ್ಯಕ್ಷ ಫಹಾದ್ ಅಹ್ಮದ್ ಅವರೊಂದಿಗೆ ಸ್ವರಾ ಮದುವೆಯಾಗಿದ್ದಾರೆ. 2023ರ ಜ.6 ರಂದು ತಮ್ಮ ಮದುವೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾಖಲೆಗಳನ್ನು ಸಲ್ಲಿಸುವ ವೇಳೆ ತೆಗೆದುಕೊಂಡ ಭಾವನಾತ್ಮಕ ಫೋಟೋಗಳನ್ನು ಹಂಚಿಕೊಂಡಿದ್ದರು. ಸ್ವರಾ ಹಾಗೂ ಫಹಾದ್ ಸಾಮಾಜಿಕ ಹೋರಾಟಗಾರರಾಗಿದ್ದಾರೆ. ಈ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ವೇಳೆ ಇಬ್ಬರಲ್ಲಿ ಪ್ರೇಮಾಂಕುರವಾಗಿ, ಇದೀಗ ಮದುವೆ ಮಾಡಿಕೊಂಡಿದ್ದಾರೆ.
ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಮತ್ತು ಈಗಾಗಲೇ ಮದುವೆಯಾಗಿದ್ದೇವೆ ಎಂದು ಸ್ವರಾ ಭಾಸ್ಕರ್ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಮೂಲಕ ಘೋಷಿಸಿದ್ದರು. ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯ ಮೂಲಕ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ. ಇತ್ತೀಚೆಗಷ್ಟೇ ಇಬ್ಬರೂ ತಮ್ಮ ಮೊದಲ ರಾತ್ರಿಯನ್ನು ಆಚರಿಸಿಕೊಂಡಿದ್ದರು. ಸ್ವರಾ ಅವರ ತಾಯಿ ಮಲಗುವ ಕೋಣೆಯನ್ನು ಗುಲಾಬಿಗಳಿಂದ ಸುಂದರವಾಗಿ ಅಲಂಕರಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋವನ್ನು ತಮ್ಮ ಸ್ವರಾ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. "ನೋಡಿ, ನಮ್ಮ ಮೊದಲ ರಾತ್ರಿಯ ಕೋಣೆಯನ್ನು ನಮ್ಮ ತಾಯಿ ಎಷ್ಟು ಸುಂದರವಾಗಿ ಅಲಂಕರಿಸಿದ್ದಾರೆ" ಎಂದು ಸ್ವರಾ ಬರೆದುಕೊಂಡಿದ್ದಾರೆ.
ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸ್ವರಾ ಅವರ ಕಾಲೆಳೆಯುತ್ತಿದ್ದಾರೆ. ಈ ಹಿಂದೆ ಫಹಾದ್ ಅವರನ್ನು ಸ್ವರಾ ಅಣ್ಣ ಎಂದು ಟ್ವಿಟ್‌ನಲ್ಲಿ ಸಂಭೋದಿಸಿದ್ದರು. ಅದನ್ನು ಮರು ನೆನಪಿಸಿ, ಫಹಾದ್ ಅವರು ಸ್ವರಾ ಅವರ ಹಿರಿಯ ಅಣ್ಣ. ಆದರೆ, ಈಗ ಇಬ್ಬರು ಮದುವೆ ಆಗಿದ್ದಾರೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಫಸ್ಟ್ ನೈಟ್ ಬೆಡ್ ರೂಮ್ ಫೋಟೋವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.