'Tecno Spark 8' ಮೊಬೈಲ್ ಫೋನ್ ಬೆಲೆ ಭರ್ಜರಿ ಇಳಿಕೆ: ಇದೀಗ ಇದರ ಬೆಲೆ 8,900 ರೂ. ಮಾತ್ರ!
ಭಾರತದ ಮೊಬೈಲ್ ಮಾರುಕಟ್ಟೆಗೆ ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಿದ್ದ ಟೆಕ್ನೋ ಕಂಪೆನಿಯ ಬಜೆಟ್ ಬೆಲೆಯ
'Tecno Spark 8' ಸ್ಮಾರ್ಟ್ಫೋನ್
ಮೊಬೈಲ್ ಬೆಲೆ ಭರ್ಜರಿಯಾಗಿ ಇಳಿಕೆ
ಕಂಡಿದೆ. ದೇಶದಲ್ಲಿ
10,999 ರೂ. ಬೆಲೆಯಲ್ಲಿ ಪರಿಚಯಗೊಂಡಿದ್ದ
4GB RAM + 64GB ಮಾದರಿಯ 'Tecno Spark 8' ಸ್ಮಾರ್ಟ್ ಮೊಬೈಲ್
ಫೋನ್ ಬೆಲೆಯಲ್ಲಿ ಬರೋಬ್ಬರಿ
2000 ರೂ.ಗಳಷ್ಟು ಇಳಿಕೆಯಾಗಿದೆ.
ಇದೀಗ ಫ್ಲಿಪ್ಕಾರ್ಟ್ನಲ್ಲಿ ಕೇವಲ
8,900 ರೂ.ಗಳ ಹೊಸ ಬೆಲೆಯಲ್ಲಿ ಈ ಮಾಡೆಲ್ ಕಾಣಿಸಿಕೊಂಡಿದೆ. ಗ್ರಾಹಕರು ಅಟ್ಲಾಂಟಿಕ್ ಬ್ಲೂ ಮತ್ತು ಐರಿಸ್ ಪರ್ಪಲ್ ಬಣ್ಣ ಆಯ್ಕೆಗಳಲ್ಲಿ ಮತ್ತು ನೋ ಕಾಸ್ಟ್ ಇಎಮ್ಐ ಆಯ್ಕೆಯಲ್ಲಿ ಸ್ಮಾರ್ಟ್ಫೋನನ್ನು ಖರೀದಿಸಲು ಅವಕಾಶ ಮಾಡಲಾಗಿದೆ.
ಕಳೆದ ನವೆಂಬರ್ ತಿಂಗಳಿನಲ್ಲಿ ದೇಶದ ಮಾರುಕಟ್ಟೆಗೆ
'Tecno Spark 8' ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಇದು
6.56-ಇಂಚಿನ ಡಿಸ್ಪ್ಲೇ
ಯನ್ನು, 16-ಮೆಗಾಪಿಕ್ಸೆಲ್
AI ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ.
MediaTek
Helio G25 ಗೇಮಿಂಗ್ SoC ನಿಂದ ಚಾಲಿತವಾಗಿದೆ. ಇದಲ್ಲದೇ, ಭಾರತೀಯ ಭಾಷಾ ಬೆಂಬಲದೊಂದಿಗೆ ಬಂದಿರುವ ಈ ಸ್ಮಾರ್ಟ್ಫೋನ್ ವೈಡ್ ಸೆಲ್ಫಿ ಮತ್ತು
AR ಶಾಟ್ ಮೋಡ್ಗಳನ್ನು ಸಹ ಬೆಂಬಲಿಸಲಿದೆ. ಹಾಗಾದರೆ, ಇದೀಗ
8,900 ರೂ.ಗಳ ಹೊಸ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಿರುವ ಈ
'Tecno Spark 8' ಸ್ಮಾರ್ಟ್ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡುವ.
'Tecno Spark 8' ಸ್ಮಾರ್ಟ್ಫೋನ್ ಫೀಚರ್ಸ್
Tecno Spark 8 ಸ್ಮಾರ್ಟ್ಫೋನ್ DUAL SIM (ನ್ಯಾನೋ) ಬೆಂಬಲದೊಂದಿಗೆ ಬಂದಿದೆ ಮತ್ತು ಕಳೆದ
Android 11 (Go ಆವೃತ್ತಿ) ನಲ್ಲಿ
HiOS v7.6 ಜೊತೆಗೆ ಕಾರ್ಯನಿರ್ವಹಿಸಲಿದೆ. ಈ SAMRTPHONE
6.56-ಇಂಚಿನ HD+ (720x1,612 ಪಿಕ್ಸೆಲ್ಗಳು) ಡಾಟ್ ನಾಚ್ ಡಿಸ್ಪ್ಲೇ ಜೊತೆಗೆ
20.15:9 ಆಕಾರ ಅನುಪಾತ,
120Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು
480 ನಿಟ್ಸ್ ಗರಿಷ್ಠ ಹೊಳಪನ್ನು ಕೂಡ ಹೊಂದಿದೆ. ಪ್ರದರ್ಶನವು
269ppi ಪಿಕ್ಸೆಲ್ ಸಾಂದ್ರತೆಯಲ್ಲಿದೆ. ಹುಡ್ ಅಡಿಯಲ್ಲಿ, ಆಕ್ಟಾ-ಕೋರ್
MediaTek Helio G25 ಗೇಮಿಂಗ್ SoC ನಿಂದ ಚಾಲಿತವಾಗಿರುವ ಈ ಸ್ಮಾರ್ಟ್ಫೋನಿನಲ್ಲಿ
4GB RAM ಮತ್ತು 64GB ಆನ್ಬೋರ್ಡ್ ಸಂಗ್ರಹಣೆಯನ್ನು ನೀಡಲಾಗಿದೆ.
Tecno Spark 8 SMARTPHONE ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು
f/1.8 ಅಪರ್ಚರ್ನೊಂದಿಗೆ
16-MEGAPIXEL ಸಂವೇದಕವನ್ನು ಹೊಂದಿದ್ದು,.ಇದನ್ನು
AI ಲೆನ್ಸ್ ಮತ್ತು ಕ್ವಾಡ್ ಫ್ಲ್ಯಾಷ್ಲೈಟ್ನೊಂದಿಗೆ ಜೋಡಿಸಲಾಗಿದೆ. ಹಿಂಬದಿಯ ಕ್ಯಾಮೆರಾದಲ್ಲಿ
AI ಬ್ಯೂಟಿ, ಸ್ಮೈಲ್ ಶಾಟ್,
AI ಪೋರ್ಟ್ರೇಟ್, HDR, AR ಶಾಟ್, ಫಿಲ್ಟರ್ಗಳು, ಟೈಮ್-ಲ್ಯಾಪ್ಸ್, ಪನೋರಮಾ, ವಿಡಿಯೋ ಬೋಕ್ಹ್ಯಾಂಡ್, ಸ್ಲೋ ಮೋಷನ್ ಮತ್ತು ಹೆಚ್ಚಿನ ಕ್ಯಾಮೆರಾ ತಂತ್ರಜ್ಞಾನಗಳು ಇವೆ. SELFIಗಳಿಗಾಗಿ ಡ್ಯುಯಲ್ ಫ್ರಂಟ್ ಫ್ಲ್ಯಾಷ್ನೊಂದಿಗೆ
8-ಮೆಗಾಪಿಕ್ಸೆಲ್ ಶೂಟರ್ ನೀಡಲಾಗಿದೆ. ಇದು ವೈಡ್ ಸೆಲ್ಫಿ ಮತ್ತು
AR ಶಾಟ್ ಮೋಡ್ಗಳನ್ನು ಸಹ ಬೆಂಬಲಿಸುತ್ತದೆ.
Tecno Spark 8 SMARTPHONE ನ ಸಂಪರ್ಕ ಆಯ್ಕೆಗಳಲ್ಲಿ 4G LTE, Wi-Fi
802.11ac, BLUETOOTH v5, GPS, ಮೈಕ್ರೋ-USB ಮತ್ತು 3.5mm ಹೆಡ್ಫೋನ್ ಜ್ಯಾಕ್ನಂತಹ ಫೀಚರ್ಸ್ಗಳಿವೆ. ಈ Tecno Spark 8 ಫೋನಿನಲ್ಲಿ DTS ಸ್ಟಿರಿಯೊ ಸೌಂಡ್ ಎಫೆಕ್ಟ್ಗಳನ್ನು ಹೊಂದಿರುವುದನ್ನು ನಾವು ನೋಡಬಹುದು. ಹಾಗೂ.ಈ ಮಾದರಿಯು ಭಾರತೀಯ ಭಾಷಾ ಬೆಂಬಲ ವೈಶಿಷ್ಟ್ಯವನ್ನು ಹೊಂದಿದೆ, ಇದು ಬಳಕೆದಾರರಿಗೆ ಆಯ್ದ ಸ್ಥಳೀಯ ಭಾಷೆಗಳಲ್ಲಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಆನ್ಬೋರ್ಡ್ನಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಸಾಮೀಪ್ಯ ಸಂವೇದಕದಕಗಳ ಜೊತೆಗೆ ಫಿಂಗರ್ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ.