-->
ವೀಕೆಂಡ್ ವಿತ್ ರಮೇಶ್: ಮೊದಲ ಅತಿಥಿ ಯಾರು ಗೊತ್ತೇ..?

ವೀಕೆಂಡ್ ವಿತ್ ರಮೇಶ್: ಮೊದಲ ಅತಿಥಿ ಯಾರು ಗೊತ್ತೇ..?

ವೀಕೆಂಡ್ ವಿತ್ ರಮೇಶ್: ಮೊದಲ ಅತಿಥಿ ಯಾರು ಗೊತ್ತೇ..?





'ವೀಕೆಂಡ್ ವಿತ್ ರಮೇಶ್' ಕಿರುಪರದೆಯಲ್ಲಿ ರಾರಾಜಿಸಲಿದೆ. ಈ ಸೀಸನ್ ನ ಮೊದಲ ಸಂಚಿಕೆ ಮಾರ್ಚ್ 25ರಂದು ಪ್ರಸಾರವಾಗಲಿದೆ.



ಮೊದಲ ಅತಿಥಿ ಯಾರು ಎಂಬ ಕುತೂಹಲ ಎಲ್ಲೆಡೆ ಹಬ್ಬಿದೆ. ಇದಕ್ಕೆ ಸ್ವತಃ ರಮೇಶ್ ಅರವಿಂದ್ ಉತ್ತರ ನೀಡಿದ್ದಾರೆ.



ಅನೇಕ ಸಾಧಕರ ಜೀವನದ ಸಿಹಿ ಕಹಿಯನ್ನು ಜನರಿಗೆ ತೋರಿಸುವ ವೀಕೆಂಡ್ ವಿತ್ ರಮೇಶ್ ಈ ಸೀಸನ್ ಮತ್ತಷ್ಟು ಗ್ರ್ಯಾಂಡ್ ಆಗಲಿದೆ. ಕಾಂತಾರ ಚಿತ್ರದ ಮೂಲಕ ಇಡೀ ಕನ್ನಡ ಚಿತ್ರರಂಗವನ್ನು ವಿಶ್ವಕ್ಕೆ ಪರಿಚಯಿಸಿದ ಹೆಮ್ಮೆಯ ಕನ್ನಡಿಗ ರಿಷಭ್ ಶೆಟ್ಟಿ ಈ ಬಾರಿ ಮೊದಲ ಅತಿಥಿಯಾಗಲಿದ್ದಾರೆ.



ಈ ಬಾರಿಯ ಸಂಚಿಕೆ ಹೇಗಿರಬಹುದು.. ಏನೆಲ್ಲ ವಿಶೇಷತೆ ಹೊಂದಿರಬಹುದು ಎಂಬ ಕುತೂಹಲ ತಣಿಯಲು ಇನ್ನೇನು ಕೆಲವೇ ದಿನಗಳು ಉಳಿದಿವೆ. ಹಾಗಾದ್ರೆ ತಡ ಮಾಡಬೇಡಿ. ಮಾರ್ಚ್ 25ರಂದು ರಾತ್ರಿ ನಿಮ್ಮ ಎಲ್ಲ ಕುತೂಹಲಕ್ಕೆ ಬ್ರೇಕ್ ಬೀಳಲಿದೆ.

Ads on article

Advertise in articles 1

advertising articles 2

Advertise under the article