-->
ಎಪ್ರಿಲ್ 14 ರಂದು "ಗೌಜಿ ಗಮ್ಮತ್" ತುಳು ಸಿನಿಮಾ ತೆರೆಗೆ

ಎಪ್ರಿಲ್ 14 ರಂದು "ಗೌಜಿ ಗಮ್ಮತ್" ತುಳು ಸಿನಿಮಾ ತೆರೆಗೆ




ಮೋವಿನ್ ಫಿಲಂಮ್ಸ್ ಲಾಂಛನದಲ್ಲಿ ಮೋಹನ್ ಭಟ್ಕಳ್, ವಿನಾಯಕ್ ತೀರ್ಥಹಳ್ಳಿ ನಿರ್ಮಾಣದಲ್ಲಿ, ಮಣಿ ಎಜೆ ಕಾರ್ತಿಕೇಯನ್  ನಿರ್ದೇಶನದಲ್ಲಿ ತಯಾರಾದ 'ಗೌಜಿ ಗಮ್ಮತ್" ( Gouji Gammath) ತುಳು ಸಿನಿಮಾ ಎಪ್ರಿಲ್ 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. 





ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಭಾರತ್ ಸಿನಿಮಾ, ಐನಾಕ್ಸ್,  ಪಡುಬಿದ್ರೆಯಲ್ಲಿ ಭಾರತ್ ಸಿನಿಮಾ, ಸುರತ್ಕಲ್ ನಲ್ಲಿ ನಟರಾಜ್, ಸಿನಿ ಗ್ಯಾಲಕ್ಸಿ, ಪುತ್ತೂರಿನಲ್ಲಿ ಅರುಣಾ,  ಭಾರತ್ ಸಿನಿಮಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ,  ಮೊದಲಾದ ಕಡೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ. 




ಗೌಜಿ ಗಮ್ಮತ್ ಸಿನಿಮಾಕ್ಕೆ ಒಂದೇ ಹಂತದಲ್ಲಿ 19 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು.

ಸಿನಿಮಾಕ್ಕೆ ಯು ಎ ಸರ್ಟಿಫಿಕೇಟ್ ದೊರೆತಿದೆ. 
ಗೌಜಿ ಗಮ್ಮತ್ ಸಿನಿಮಾ ಹಾಸ್ಯ ಮನರಂಜನೆಯ ಚಿತ್ರ. ಈಗಿನ ಪೀಳಿಗೆ ಇಷ್ಟ ಪಡುವ ಕತೆಯನ್ನು ಇಲ್ಲಿ ಹಾಸ್ಯಭರಿತವಾಗಿ ನಿರ್ದೇಶಕರು ಹೆಣೆದಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶವೂ ಈ ಸಿನಿಮಾದಲ್ಲಿದೆ ಎನ್ನುತ್ತಾರೆ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಮೋಹನ್ ಭಟ್ಕಳ್.




ಗೌಜಿ ಗಮ್ಮತ್ ಹೆಸರು ಸೂಚಿಸುವಂತೆ ಇದು ಹಾಸ್ಯ ಪ್ರಧಾನ ಸಿನಿಮಾ. ಪ್ರೇಕ್ಷಕರ ನಾಡಿಮಿಡಿತವನ್ನು ಅರಿತು ನಿರ್ದೇಶಕ ಮಣಿ ಎಜೆ ಕಾರ್ತಿಕೇಯನ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆ ಸಂಭಾಷಣೆಯನ್ನು ಸಂದೀಪ್ ಬೆದ್ರ ಬರೆದಿದ್ದಾರೆ. 





ತಾರಾಬಳಗದಲ್ಲಿ ಖ್ಯಾತ ನಾಮ ಕಲಾವಿದರಿದ್ದಾರೆ. ಮುಖ್ಯವಾಗಿ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ 
ಕುಸಲ್ದರಸೆ  ನವೀನ್ ಡಿ ಪಡೀಲ್,   ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಪ್ರಮುಖ ಪಾತ್ರದಲ್ಲಿದ್ದಾರೆ. 




ನಾಯಕ  ನಟನಾಗಿ  ಕರ್ಣ ಉದ್ಯಾವರ್  ನಾಯಕಿಯಾಗಿ  ಸ್ವಾತಿ ಪ್ರಕಾಶ್  ಶೆಟ್ಟಿ ಅಭಿನಯಿಸಿದ್ದಾರೆ.
ಇನ್ನುಳಿದಂತೆ ಪ್ರಸನ್ನ ಶೆಟ್ಟಿ ಬೈಲೂರ್,  ಉಮೇಶ್ ಮಿಜಾರ್,   ಜಯಶೀಲಾ ಮರೋಳಿ, ಪ್ರಭಾಕರ್ ಬ್ರಹ್ಮಾವರ,  ಚಂದ್ರಹಾಸ ಶೆಟ್ಟಿ ಮಾಣಿ , ಸುಜಾತ ಶಕ್ತಿನಗರ,  ಕಿಶೋರ್ ಶೆಟ್ಟಿ ಪಿಲಾರ್,  ಹರೀಶ್ ಪೂಜಾರಿ ಕಡ್ತಲ,  ಹರೀಶ್ಚಂದ್ರ ಪೆರಾಡಿ ಪ್ರಭಾಕರ್ ಆಚಾರ್‍ಯ ಮೂಡುಬೆಳ್ಳೆ,  ಅಶ್ವತ್ ಶೆಟ್ಟಿ ವಿಕ್ಕಿ ರಾವ್ ಮಿರ್ಚಿ ಸಂದೇಶ್ ದೇವಾಡಿಗ ಅಶ್ವತ್ಥಪುರ ಶಿವರಾಮ್ ವಿಟ್ಲ ರಾಧಿಕಾ ಭಟ್  ವನಿತಾ ಸುವರ್ಣ ನರಸಿಂಹ ನಾಯಕ್, ರಶ್ಮಿತಾ ಸಾಲಿಯಾನ್ ಪಿಲಾರ್ ,ಸುರಕ್ಷಾ ಕೋಟ್ಯಾನ್ ಪಿಲಾರ್ , ಲೊಕೇಶ್ ಮಾಣಿಲ  ಅನುಷಾ ಶೆಟ್ಟಿ , ಬೇಬಿ ಚಿತ್ರಿತಾ ದೇವಾಡಿಗ ಹಳೆಯಂಗಡಿ  , ಲೊಕೇಶ್ ಶೆಟ್ಟಿ  , ಜ್ಞಾನೇಶ್ ಆಚಾರ್‍ಯ ,ಶಶಿರಾಜ್ ಆಚಾರ್‍ಯ  ಮಧು ಪೂಜಾರಿ ವಿಷ್ಣುನಗರ ನಿಲೇಶ್ ಶೆಟ್ಟಿ ಇನ್ನ, ಮೊದಲಾದವರಿದ್ದಾರೆ. 





ತಂತ್ರಜ್ಞರು
ವಸ್ತ್ರಾಲಂಕಾರ -ರಾಮದಾಸ್ ಸಸಿಹಿತ್ಲು  , ಕಲೆ ಕೃಷ್ಣ ,
ನಿರ್ದೇಶನ ತಂಡ - ರಾಮದಾಸ್ ಸಸಿಹಿತ್ಲು, ಕರ್ಣ ಉದ್ಯಾವರ್, ಗೌರವ್ ರೈ , ಛಾಯಗ್ರಹಣ ಸಹಾಯ - ವೇಣು ಗೋಪಾಲ್ ಮೇಕಪ್ - ಮಂಜುನಾಥ್ ಶೆಟ್ಟಿಗಾರ್ ಮುಂಬೈ   ಸಂಕಲನ - ಮೇವಿನ್ ಜೋಯಲ್ ಪಿಂಟೋ ಸಾಹಿತ್ಯ - ಕಿಶೋರ್ ಮೂಡಬಿದಿರೆ,ಮಯೂರ್ ನಾಯ್ಗ, ಸಂದೀಪ್ ಬೆದ್ರ ಸಂಗೀತ : ಸಾಮುವೆಲ್ ಎಬಿ
ಸಹ ನಿರ್ದೇಶಕ - ಸಂದೀಪ್ ಬೆದ್ರ  ಎಕ್ಸ್‌ಕ್ಯೂಟಿವ್ ಪ್ರೊಡ್ಯುಸರ್ - ತುಷಾರ್ ಸುರತ್ಕಲ್  , ಸಂಗೀತ ಸ್ಯಾಮುವಲ್ ಎಬಿ ಛಾಯಾಗ್ರಹಣ - ವಿ. ರಾಮಾಂಜನೇಯ  ಚಿತ್ರಕಥೆ - ಸಂಭಾಷಣೆ - ಸಂದೀಪ್ ಬೆದ್ರ, ನಿರ್ಮಾಪಕರು ಮೋಹನ್ ಭಟ್ಕಳ್, ವಿನಾಯಕ್ ತೀರ್ಥಹಳ್ಳಿ , ಕಥೆ - ನಿರ್ದೇಶನ - ಮಣಿ. ಎಜೆ. ಕಾರ್ತಿಕೇಯನ್


ಕಥಾ ಸಾರಾಂಶ

ಸುಂದರ ಕೌಟುಂಬಿಕ ಹಾಸ್ಯವನ್ನಾಧಾರಿತ ಕಥಾ ಹಂದರವಿರುವ ಚಿತ್ರ ಗೌಜಿ ಗಮ್ಮತ್. ಒಂದು ಸಂಸಾರದಲ್ಲಿ ವಿವಿಧ ರೀತಿಯ ಮನಸ್ಥಿತಿಗಳಿರುತ್ತದೆ. ನಾನು ಹೇಳಿದ್ದೇ ಸರಿ, ತಾನು ಮಾಡಿದ್ದೇ ಸರಿ ಎಂಬ ಸ್ಫರ್ಧಾತ್ಮಕ ವ್ಯಕ್ತಿತ್ವಗಳಿರುತ್ತದೆ. ಅದು ಸಮಾಜಕ್ಕೆ ಕೆಲವೊಮ್ಮೆ ಹಾಸ್ಯವಾಗಿ ಕಾಣುತ್ತದೆ, ಕೆಲವೊಮ್ಮೆ ಗಂಭೀರವಾಗಿ ಕಾಣುತ್ತದೆ. ಆದರೆ ಆ ಮನಸ್ಥಿತಿಗಳಿಂದಿರುವ ಭಾವನೆಗಳು ಕೆಲವೊಮ್ಮೆ ಮನಮುಟ್ಟುವಂತಿರುತ್ತದೆ. ಆ ಭಾವನೆಗಳು ಮತ್ತು ಭಾವನೆಗಳ ಉದ್ದೇಶಗಳು ಹಾಗೂ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಆ ಪಾತ್ರಗಳು ಹೇಗೆ ಬಗೆಹರಿಸುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತವಾಗಿ ತೋರುವ ಕಥೆಯೇ ಗೌಜಿ ಗಮ್ಮತ್.

Ads on article

Advertise in articles 1

advertising articles 2

Advertise under the article