ವಿಷಕಾರಿ ಅಣಬೆ ಸೇವನೆ 2ವರ್ಷದ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತ್ಯು
Monday, April 10, 2023
ಅಸ್ಸಾಂ: ವಿಷಕಾರಿ ಅಣಬೆ ಪದಾರ್ಥವನ್ನು ಸೇವಿಸಿ 2 ವರ್ಷದ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟ ದುರ್ಘಟನೆ ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಮೆರಪಾನಿ ಪ್ರದೇಶದಲ್ಲಿ ರವಿವಾರ ನಡೆದಿದೆ.
ಐದು ಕುಟುಂಬದ ಸುಮಾರು 13 ಮಂದಿ ಸದಸ್ಯರು ಏಪ್ರಿಲ್ 2 ರಂದು ಅಣಬೆ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಈ ದುರ್ಘಟನೆಯಲ್ಲಿ ಹೇಮಂತ ಬರ್ಮನ್ ಎಂಬ ಎರಡು ವರ್ಷದ ಹಸುಗೂಸು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟರೆ ಶುಕ್ರವಾರದಂದು ಮಗುವಿನ ತಾಯಿ ತರಲಿ ಬರ್ಮನ್ (23) ಮತ್ತು ಶನಿವಾರ ತಂದೆ ಪ್ರಫುಲ್ಲ ಬರ್ಮನ್ (24) ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮೇರಪಾನಿ ಸಮುದಾಯ ಆರೋಗ್ಯ ಕೇಂದ್ರದ ಉಪ ಅಧೀಕ್ಷಕ ಡಾ.ಚಂದ್ರ ಶ್ಯಾಮ್ ಮಾತನಾಡಿ, ‘ವಿಷಪೂರಿತ ಅಣಬೆ ಸೇವಿಸಿದ ಐದು ಕುಟುಂಬಗಳ ಒಟ್ಟು 13 ಮಂದಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅದರಲ್ಲಿ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಉಳಿದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.