ಮತ್ತಷ್ಟು ಅಚ್ಚರಿಯ ಬಿಜೆಪಿ ಪಟ್ಟಿ: ಏಳು ಶಾಸಕರಿಗೆ ಟಿಕೆಟ್ ಇಲ್ಲ!
ಮತ್ತಷ್ಟು ಅಚ್ಚರಿಯ ಬಿಜೆಪಿ ಪಟ್ಟಿ: ಏಳು ಶಾಸಕರಿಗೆ ಟಿಕೆಟ್ ಇಲ್ಲ!
ಆತುರಾತುರವಾಗಿ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಎದ್ದ ಬಂಡಾಯದ ಬಿಸಿಗೆ ಮತ್ತಷ್ಟು ತುಪ್ಪ ಸುರಿಯುವಂತೆ ಮಾಡಿದ್ದು, ಪಕ್ಷದ ಕಾರ್ಯಕರ್ತರ ಬೇಗುದಿಗೆ ಕಾರಣವಾಗಿದೆ.
ಶಿವಮೊಗ್ಗ ನಗರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಸೇರಿದಂತೆ ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಯನ್ನು ಬಿಜೆಪಿ ಇನ್ನೂ ಪ್ರಕಟಿಸಿಲ್ಲ. ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದು, ನಾಮಪತ್ರ ಪ್ರಕ್ರಿಯೆ ಶುರುವಾಗಿದ್ದರೂ ಬಿಜೆಪಿ ತನ್ನ ಕಾದು ನೋಡುವ ತಂತ್ರಕ್ಕೆ ಅಂಟಿಕೊಂಡಿದೆ.
ಮೂಡಿಗೆರೆ ಹಾಲಿ ಶಾಸಕ ಕುಮಾರಸ್ವಾಮಿ ಹಾಗೂ ಬೈಂದೂರು ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅವರೊಂದಿಗೆ ಇನ್ನೂ ಐವರು ಹಾಲಿ ಶಾಶಕರಿಗೆ ಟಿಕೆಟ್ ನೀಡಿಲ್ಲ. ಹರಪನಹಳ್ಳಿಯಲ್ಲಿ ಕರುಣಾಕರ ರೆಡ್ಡಿ ಅವರಿಗೆ ಟಿಕೆಟ್ ಒಲಿದಿದೆ.
ಭಾಲ್ಕಿಯಲ್ಲಿ ಪ್ರಕಾಶ್ ಖಂಡ್ರೆ, ಬಸವನ ಬಾಗೇವಾಡಿಯಲ್ಲಿ ಎಸ್.ಕೆ. ಬೆಳ್ಳುಬ್ಬಿಗೆ ಟಿಕೆಟ್ ನೀಡಲಾಗಿದೆ. ಮೂಡಿಗೆರೆಯಲ್ಲಿ ದೀಪಕ್ ದೊಡ್ಡಯ್ಯ ಹಾಗೂ ಬೈಂದೂರಿನಲ್ಲಿ ಗುರುರಾಜ ಗಂತಿಹೊಳೆ ಅವರನ್ನು ಕಣಕ್ಕಿಳಿಸಿ ಅಚ್ಚರಿ ನೀಡಿದೆ.
23 ಮಂದಿ ಅಭ್ಯರ್ಥಿಗಳ ವಿವರ
ದೇವರ ಹಿಪ್ಪರಗಿ -ಸೋಮನಗೌಡ ಪಾಟೀಲ
ಬಸವನ ಬಾಗೇವಾಡಿ - ಎಸ್.ಕೆ.ಬೆಳ್ಳುಬ್ಬಿ
ಇಂಡಿ - ಕಾ ಸಗೌಡ ಬಿರಾದಾರ್
ಗುರುಮಿಟ್ಕಲ್ - ಲಲಿತಾ ಅಣ್ಣಾಪುರ್
ಬೀದರ್ - ಈಶ್ವರ್ ಸಿಂಗ್ ಠಾಕೂರ್
ಭಾಲ್ಕಿ - ಪ್ರಕಾಶ ಖಂಡ್ರೆ
ಗಂಗಾವತಿ - ಪರಣ್ಣ ಮುನವಳ್ಳಿ
ಕಲಘಟಗಿ - ನಾಗರಾಜ ಛಬ್ಬಿ
ಹಾನಗಲ್ - ಶಿವರಾಜ ಸಜ್ಜನರ
ಹಾವೇರಿ - ಗವಿಸಿದ್ದಪ್ಪ ದ್ಯಾಮನ್ನವರ
ಹರಪನಹಳ್ಳಿ - ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ - ಲೋಕಿಕೆರೆ ನಾಗರಾಜ
ದಾವಣಗೆರೆ ದಕ್ಷಿಣ - ಅಜಯ ಕುಮಾರ್
ಮಾಯಕೊಂಡ - ಬಸವರಾಜ ನಾಯ್ಕ
ಚನ್ನಗಿರಿ - ಶಿವಕುಮಾರ್
ಬೈಂದೂರು - ಗುರುರಾಜ್ ಗಂತಿಹೊಳೆ
ಮೂಡಿಗೆರೆ - ದೀಪಕ್ ದೊಡ್ಡಯ್ಯ
ಗುಬ್ಬಿ - ಎಸ್. ಡಿ. ದಿಲೀಪ ಕುಮಾರ
ಶಿಡ್ಲಘಟ್ಟ - ರಾಮಚಂದ್ರ ಗೌಡ
ಕೆ.ಜಿ.ಎಫ್. - ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ - ಚಿದಾನಂದ
ಅರಸೀಕೆರೆ - ಜಿ.ವಿ.ಬಸವರಾಜು
ಎಚ್.ಡಿ.ಕೋಟೆ - ಕೃಷ್ಣ ನಾಯ್ಕ