ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ 3 ರಾಶಿಯವರ ಜೀವನದಲ್ಲಿ ಅಪಾರ ಕೀರ್ತಿ,ಸಂಪತ್ತು,ಯಶಸ್ಸು ಪ್ರಾಪ್ತಿ..!
Saturday, April 1, 2023
ಮಿಥುನ ರಾಶಿ : ಬುಧ ಸಂಕ್ರಮಣದಿಂದ ರೂಪುಗೊಂಡಿರುವ ಲಕ್ಷ್ಮೀ ನಾರಾಯಣ ರಾಜಯೋಗವು ಮಿಥುನ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಹೊಸ ಮೂಲಗಳಿಂದ ಹಣ ಹರಿದು ಬರಲಿದೆ.
ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಲಕ್ಷ್ಮೀ ನಾರಾಯಣ ರಾಜಯೋಗವು ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವನ್ನು ನೀಡುತ್ತದೆ. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಕೆಲಸವನ್ನು ಬದಲಾಯಿಸಲು ಯೋಚಿಸುವವರಿಗೆ ಇದು ಸರಿಯಾದ ಸಮಯ.
ಸಿಂಹ ರಾಶಿ : ಬುಧ ಸಂಕ್ರಮಣದಿಂದ ರೂಪುಗೊಂಡ ಲಕ್ಷ್ಮೀ ನಾರಾಯಣ ರಾಜಯೋಗವು ಸಿಂಹ ರಾಶಿಯವರಿಗೆ ಬಹಳ ಮಂಗಳಕರವಾಗಿರಲಿದೆ. ಅದೃಷ್ಟ ಈ ರಾಶಿಯವರ ಬೆನ್ನ ಹಿಂದೆಯೇ ಇರಲಿದೆ. ಅವರು ತಮ್ಮ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತಾರೆ. ಆದಾಯ ಹೆಚ್ಚಾಗಲಿದೆ.