ಮೇಷ ರಾಶಿಗೆ ಸೂರ್ಯನ ಪ್ರವೇಶ ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ..? ಈ 3 ರಾಶಿಗೆ ಅಧಿಕ ಲಾಭ!
Saturday, April 1, 2023
ಮೇಷ ರಾಶಿ
ಮೇಷ ರಾಶಿಯಲ್ಲಿಯೇ ಸೂರ್ಯನ ಪ್ರವೇಶ ಆಗುತ್ತಿರುವುದರಿಂದ ಇದು ಈ ರಾಶಿಯವರ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಲಿದೆ. ಈ ಸಮಯದಲ್ಲಿ ಮೇಷ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ನೀವು ಕೈ ಹಾಕಿದ ಪ್ರತಿ ಕೆಲಸದಲ್ಲಿಯೂ ಯಶಸ್ಸು ನಿಮ್ಮದಾಗಲಿದೆ. ಮಿಥುನ ರಾಶಿ:
ಸೂರ್ಯ ರಾಶಿ ಪರಿವರ್ತನೆಯು ಮಿಥುನ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡಲಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಆದಾಯವೂ ಹೆಚ್ಚಾಗಲಿದೆ.
ಸಿಂಹ ರಾಶಿ:
ಸಿಂಹ ರಾಶಿಯ ಅಧಿಪತಿಯಾಗಿರುವ ಸೂರ್ಯ ಸಂಚಾರವು ಈ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದೆ. ಈ ಸಮಯದಲ್ಲಿ ವೃತ್ತಿ ರಂಗದಲ್ಲಿ ನಿರೀಕ್ಷಿತ ಯಶಸ್ಸು ನಿಮ್ಮದಾಗಲಿದೆ. ವಿದೇಶಕ್ಕೆ ತೆರಳಲು ಬಯಸುವವರಿಗೂ ಅವಕಾಶ ದೊರೆಯಲಿದೆ.
ವೃಶ್ಚಿಕ ರಾಶಿ:
ಸೂರ್ಯ ರಾಶಿ ಪರಿವರ್ತನೆಯಿಂದ ವೃಶ್ಚಿಕ ರಾಶಿಯವರಿಗೂ ಇನ್ನೇರಡು ವಾರಗಳ ಬಳಿಕ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಬಂಪರ್ ಧನವೃಷ್ಟಿಯನ್ನು ನೀಡಲಿದೆ. ಉದ್ಯೋಗ ರಂಗದಲ್ಲಿಯೂ ಪ್ರಗತಿಯಾಗಲಿದ್ದು, ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ಆರೋಗ್ಯ ಭಾಗ್ಯವೂ ಇದೆ.