ಶುಕ್ರನ ರಾಶಿ ಬದಲಾವಣೆಯ ಪರಿಣಾಮ ಈ 3 ರಾಶಿಯವರಿಗೆ ವೃತ್ತಿ ಜೀವನದಲ್ಲಿ ಯಶಸ್ಸು..!
Sunday, April 2, 2023
ಮೇಷ ರಾಶಿ : ಮೇಷ ರಾಶಿಯವರಿಗೆ ಶುಕ್ರ ಸಂಕ್ರಮಣವು ಶುಭವಾಗಿರಲಿದೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯಲಿದ್ದಾರೆ. ಹೊಸ ಸ್ಥಾನಮಾನಕ್ಕೆ ಏರಲಿದ್ದಾರೆ. ಈ ಹೊತ್ತಿನಲ್ಲಿ ನಿಮ್ಮ ಜೀವನಕ್ಕೆ ಸಂಬಂಧಿಸಿದ ಮುಖ್ಯ ನಿರ್ಧಾರ ತೆಗೆದುಕೊಳ್ಳುವಿರಿ.
ವೃಷಭ ರಾಶಿ : ಶುಕ್ರನು ವೃಷಭ ರಾಶಿಯ ಅಧಿಪತಿಯೂ ಹೌದು. ಈ ಕಾರಣದಿಂದ ಶುಕ್ರನು ವೃಷಭ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತಾನೆ. ಉದ್ಯೋಗಸ್ಥರು ತಮ್ಮ ವೃತ್ತಿಯಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಪ್ರತಿ ಹಂತದಲ್ಲಿಯೂ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ.
ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಶುಕ್ರ ಸಂಚಾರವು ಅನುಕೂಲಕರವಾಗಿರುತ್ತದೆ. ಉದ್ಯೋಗದ ಹುಡುಕಾಟ ಕೊನೆಗೊಳ್ಳುತ್ತದೆ. ವೃತ್ತಿ ಜೀವನದಲ್ಲಿ ಸುಧಾರಣೆ ಕಂಡುಬರಲಿದೆ. ಕೆಲಸದ ಸ್ಥಳದಲ್ಲಿ ಪ್ರಭಾವ ಹೆಚ್ಚಾಗುತ್ತದೆ. ವ್ಯಾಪಾರ ಕೈ ಹಿಡಿಯಲಿದೆ.
ಕನ್ಯಾ ರಾಶಿ : ಶುಕ್ರನ ಸಂಕ್ರಮಣವು ಕನ್ಯಾ ರಾಶಿಯವರಿಗೆ ಸಂಬಂಧಗಳ ವಿಷಯದಲ್ಲಿ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಸಂಗಾತಿಯೊಂದಿಗಿನ ಪ್ರೀತಿ ಹೆಚ್ಚಾಗುತ್ತದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ಇರುತ್ತದೆ.
ಮಕರ ರಾಶಿ : ಶುಕ್ರನ ಸಂಚಾರವು ಮಕರ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳನ್ನು ನೀಡುತ್ತದೆ. ಬಡ್ತಿ ಸಿಗುವ ಸಾಧ್ಯತೆಗಳಿವೆ. ವ್ಯಾಪಾರ ವ್ಯವಹಾರ ಉತ್ತಮವಾಗಿ ನಡೆಯಲಿದೆ.