ದುಬಾರಿ ಬೆಲೆಯ ಕಾರಿನ ಫ್ಯಾನ್ಸಿ ನಂಬರ್ ಗಾಗಿ 4.7 ಲಕ್ಷ ರೂ. ವ್ಯಯಿಸಿದ ಸ್ಟಾರ್ ನಟ
Friday, April 14, 2023
ಚೆನ್ನೈ: ಸ್ಟಾರ್ ನಟ, ನಟಿಯರು, ಸೆಲೆಬ್ರಿಟಿಗಳು ಬೆಲೆ ಬಾಳುವ ಮನೆ, ಫ್ಲ್ಯಾಟ್, ಕಾರು ಖರೀದಿ ಮಾಡುವುದು ಮಾಮೂಲಿ. ಇದು ಕೆಲವೊಂದು ಬಾರಿ ಸಖತ್ ಸುದ್ದಿಯನ್ನು ಮಾಡುತ್ತಿರುತ್ತದೆ. ಅದೇ ರೀತಿ ಕೆಲವೊಮ್ಮೆ ಸೆಲೆಬ್ರಿಟಿಗಳು ತಮಗೆ ಬೇಕಾಗಿರುವ ಫ್ಯಾನ್ಸಿ ಫೋನ್ ನಂಬರ್ ಮತ್ತು ಕಾರಿನ ಫ್ಯಾನ್ಸಿ ನಂಬರ್‌ಗಾಗಿ ಲಕ್ಷಾಂತರ ರೂ. ಹಣವನ್ನು ವ್ಯಯಿಸುತ್ತಾರೆ. ಇದೇ ಸಾಲಿಗೆ ಇದೀಗ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿಯವರು ಸೇರಿದ್ದಾರೆ.
ಹೌದು.. ನಟ ಚಿರಂಜೀವಿ ದುಬಾರಿ ಬೆಲೆಯ ಟೊಯೊಟಾ ವೆಲ್‌ಫೈ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ನೋಂದಣಿ ಸಂಖ್ಯೆ TS 09 GB 1111. ತಮ್ಮ ಕಾರಿಗೆ ಇದೇ ಫ್ಯಾನ್ಸಿ ಸಂಖ್ಯೆ ಬೇಕೆಂಬುದು ಅವರ ಬಯಕೆ ಆಗಿತ್ತು. ಈ ನಂಬರ್‌ಗಾಗಿ ಲಕ್ಷಾಂತರ ರೂ. ಹಣವನ್ನು ವ್ಯಯಿಸಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ.
ಈ ಐಷಾರಾಮಿ ವಾಹನದ ಆನ್ ರೋಡ್ ಬೆಲೆ 1.2 ಕೋಟಿ ರೂ. ವಿಶೇಷವೆಂದರೆ, ಚಿರಂಜೀವಿಯವರು ಈ ಕಾರಿಗೆ 1111 ನಂಬರ್ ಪಡೆದಿದ್ದಾರೆ. ಇದಕ್ಕಾಗಿ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಮೂಲಗಳ ಪ್ರಕಾರ ಬರೋಬ್ಬರಿ 4.7 ಲಕ್ಷ ರೂ. ವ್ಯಯ ಮಾಡಿ ಈ ರಿಜಿಸ್ಟ್ರೇಷನ್ ನಂಬರ್ ಪಡೆದಿದ್ದಾರೆ. ಈ ಸುದ್ದಿ ಕೇಳಿ ಚಿರಂಜೀವಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.