-->
ಮಡಿದಿದ್ದಾಳೆ ಎನ್ನಲಾದ ಹೆತ್ತತಾಯಿ 54 ದಿನಗಳ ಬಳಿಕ ಪತ್ತೆ: ಮಿರಾಕಲ್ ಬೇಬಿ ಬಾಳಲ್ಲಿ ಮತ್ತೊಂದು ಪವಾಡ‌

ಮಡಿದಿದ್ದಾಳೆ ಎನ್ನಲಾದ ಹೆತ್ತತಾಯಿ 54 ದಿನಗಳ ಬಳಿಕ ಪತ್ತೆ: ಮಿರಾಕಲ್ ಬೇಬಿ ಬಾಳಲ್ಲಿ ಮತ್ತೊಂದು ಪವಾಡ‌


ನವದೆಹಲಿ: ಈ ನವಜಾತ ಶಿಶು ಬದುಕುಳಿದಿದ್ದೇ ಒಂದು ಪವಾಡ. ಆದರೆ ಈ ಶಿಶುವಿನ ಹೆತ್ತತಾಯಿ ಮಡಿದಿದ್ದಾಳೆಂಬ ಸುದ್ದಿ ಆ ಬಳಿಕ ಬರಸಿಡಿಲಿನಂತೆ ಎರಗಿತ್ತು. ಆದರೆ ಈ ನಡುವೆ ಮಗುವಿನ ಬಾಳಿನಲ್ಲಿ ಮತ್ತೊಂದು ಪವಾಡ ಸಂಭವಿಸಿಬಿಟ್ಟಿದೆ. ಸತ್ತು ಹೋಗಿದ್ದಳೆನ್ನಲಾದ ಮಗುವಿನ ಹೆತ್ತಾತಾಯಿ 54 ದಿನಗಳ ಬಳಿಕ ಪತ್ತೆಯಾಗಿದ್ದು, ಮಗು ಅಮ್ಮನ ಮಡಿಲನ್ನು ಸೇರಿದೆ.

ಇದು ಟರ್ಕಿಯ ಭೂಕಂಪದಲ್ಲಿ 128 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿಯೂ ಜೀವಂತವಾಗಿ ರಕ್ಷಿಸಲ್ಪಟ್ಟ ಮಗುವಿನ ಕಥೆ. ಇದೇ ಕಾರಣಕ್ಕೆ ಈ ಶಿಶುವನ್ನು ಮಿರಾಕಲ್ ಬೇಬಿ ಎಂದು ಕರೆಯಲಾಗುತ್ತಿದೆ. ಫೆಬ್ರವರಿಯಲ್ಲಿ ಸಂಭವಿಸಿರುವ ಭೀಕರ ಭೂಕಂಪದಲ್ಲಿ 128 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದೂ ಬದುಕುಳಿದಿದ್ದರಿಂದ ಈ ಮಗುವನ್ನು ಮಿರಾಕಲ್ ಬೇಬಿ ಎಂದು ಕರೆಯಲಾಗಿತ್ತು.

ಆದರೆ ಈ ಮಗುವಿನ ತಾಯಿ ಇದೇ ಭೂಕಂಪದಲ್ಲಿ ಸತ್ತು ಹೋಗಿದ್ದಳು ಎನ್ನಲಾಗಿತ್ತು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಶಿಶು ತನ್ನ ತಾಯಿಯ ಮಡಿಲನ್ನು ಸೇರಿದೆ ಎಂದು ತಿಳಿದುಬಂದಿದೆ. ಆಕೆ ಇನ್ನೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಟರ್ಕಿ ಸಚಿವರ ಸಲಹೆಗಾರ ಆಂಟನ್ ಗೆರಶ್ಚಾಂಕೊ ಈ ಕುರಿತು ಟ್ವಿಟ್ ಮಾಡಿದ್ದಾರೆ. ಡಿಎನ್ಎ ಪರೀಕ್ಷೆ ಮೂಲಕ ಈ ತಾಯಿ-ಮಗುವನ್ನು ಖಚಿತಪಡಿಸಿಕೊಂಡು ಜೊತೆ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article