-->
ಮಂಗಳೂರು : ಕಾಂಗ್ರೆಸ್ ನಲ್ಲಿ 60 ಕಡೆಗಳಲ್ಲಿ ಸಮರ್ಥ ಅಭ್ಯರ್ಥಿಗಳಿಲ್ಲ ಅದಕ್ಕೆ ಅರ್ಧಕ್ಕೆ ಪಟ್ಟಿ ಬಿಡುಗಡೆ ನಿಲ್ಲಿಸಲಾಗಿದೆ - ಸಿಎಂ

ಮಂಗಳೂರು : ಕಾಂಗ್ರೆಸ್ ನಲ್ಲಿ 60 ಕಡೆಗಳಲ್ಲಿ ಸಮರ್ಥ ಅಭ್ಯರ್ಥಿಗಳಿಲ್ಲ ಅದಕ್ಕೆ ಅರ್ಧಕ್ಕೆ ಪಟ್ಟಿ ಬಿಡುಗಡೆ ನಿಲ್ಲಿಸಲಾಗಿದೆ - ಸಿಎಂ


ಮಂಗಳೂರು: ಕಾಂಗ್ರೆಸ್ ನಲ್ಲಿ 60-65 ಕಡೆಗಳಲ್ಲಿ ಟಿಕೆಟ್ ನೀಡಲು ಸಮರ್ಥ ಅಭ್ಯರ್ಥಿಗಳಿಲ್ಲ. ಆದ್ದರಿಂದ 160 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ನಿಲ್ಸಿದ್ದಾರೆ. ಅವರದ್ದು ಆರಂಭ ಶೂರತ್ವ ತೋರಿಸಿದ್ದ ಹೊರತು, ಇಂದಿನವರೆಗೂ ಉಳಿದ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಅದರ ಅರ್ಥ ಅವರದ್ದು ಆಮದು ಮಾಡುವ ರಾಜನೀತಿ. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಕನಸಿನ ಮಾತು ಎಂದು ಸಿಎಂ ಬಸವರಾಜ ಬೊಮ್ಮಾಯಿಯರು ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮುಂದಿನ ಪಟ್ಟಿಯಲ್ಲಿ ಅಚ್ಚರಿಯ ಹೆಸರು ಬರುತ್ತದೆ ಎಂಬ ಹೇಳಿರುವ ಡಿಕೆಶಿ ಬಿಜೆಪಿ ಬಂಡಾಯ ನಾಯಕರನ್ನು ಸೆಳೆದು ಟಿಕೆಟ್ ಕೊಡಬಹುದೇ ಎಂಬ ಪ್ರಶ್ನೆಗೆ ಬಗ್ಗೆ ಈ ರೀತಿಯಲ್ಲಿ ಪ್ರತಿಕ್ರಿಯಿಸಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಪಟ್ಟಿ ಬಿಡುಗಡೆಯಾಗಿದ್ದು, ಇನ್ನು 12 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ಅಸಮಾಧಾನವಿದ್ದವರು ರಾಜೀನಾಮೆ ನೀಡುತ್ತಿದ್ದಾರೆ. ಈಗಾಗಲೇ ಕಾರ್ಯಕರ್ತರೊಂದಿಗೆ ಮಾತನಾಡಲಾಗುತ್ತಿದ್ದು, ಬಹುತೇಕವಾಗಿ ಶಮನವಾಗಲಿದೆ ಎಂದರು.

ಲಕ್ಷ್ಮಣ ಸವದಿ ಅಸಮಾಧಾನದ ಬಗ್ಗೆ ಮಾತನಾಡಿದ ಸಿಎಂ, ಅವರು ಸೀನಿಯರ್ ಆಗಿದ್ದು, ಅವರಿಗೂ ಭಾವನೆಗಳಿವೆ. ಸುದೀರ್ಘವಾದ ಸಾರ್ವಜನಿಕ ಜೀವನದಲ್ಲಿ ಅವರು ಇದ್ದಾರೆ. ಆದ್ದರಿಂದ ಕ್ಷೇತ್ರದ ಜನರ ವಿಶ್ವಾಸವನ್ನೂ ಉಳಿಸಬೇಕಾಗಿದೆ. ಆದ್ದರಿಂದ ಆ ಕಡೆಯಿಂದಲೂ ಒತ್ತಡವಿದೆ. ಹೀಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸರಿಯಾಗುತ್ತದೆ ಎಂದು ಬೊಮ್ಮಾಯಿಯರು ಹೇಳಿದರು.

ಕಾಂಗ್ರೆಸ್ ಮುಖಂಡರೊಂದಿಗೆ ಅವರು ಇಂದು ಮಾತನಾಡುವ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ. ನನಗೆ ವಿಶ್ವಾಸವಿದೆ. ನಮ್ಮೊಂದಿಗೆ ಬಹಳ ಭಾವನಾತ್ಮಕ ಸಂಬಂಧವಿದೆ. ಕೋಪದಲ್ಲೇನೋ ಹೇಳಿರಬಹುದು. ಸರಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಟಿಕೆಟ್ ಕೈತಪ್ಪಿರುವ ಕೋಪದಲ್ಲಿ ನೆಹರೂ ಓಲೆಕರ್ ತಮ್ಮ ವಿರುದ್ಧವೇ 1,500 ಕೋಟಿ ರೂ. ಹಗರಣದ ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ದಾಖಲೆ ಸಮೇತ ಆರೋಪ ಮಾಡಲಿ. ಬರೀ ಹೇಳಿಕೆಗಳಿಂದಲೇ ಹಗರಣ ಆಗೋಲ್ಲ. ಅದರ ಸತ್ಯಾಸತ್ಯತೆಯ ತನಿಖೆಯಾಗಲಿ ಎಂದರು.

ಚುನಾವಣೆ ಸಂದರ್ಭದಲ್ಲಿ ಈಕಡೆಯವರು ಆಕಡೆಗೆ ಆಕಡೆಯವರು ಈಕಡೆಗೆ ಹೋಗೋದು ಸರ್ವೇ ಸಾಮಾನ್ಯ. ಅದರ ಬಗ್ಗೆ ದೊಡ್ಡ ಬದಲಾವಣೆಯೇನೂ ಇಲ್ಲ. ಹಾಲಿ ಶಾಸಕರು ಟಿಕೆಟ್ ಕೈತಪ್ಪಿದ ಕೋಪದಲ್ಲಿ ಬಂಡಾಯವೇಳುವ ಸಾಧ್ಯತೆಯಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿಯರು, ಅದನ್ನು ಸರಿಪಡಿಸುತ್ತೇವೆ. ನಮ್ಮ ಕಾರ್ಯಕರ್ತರು ಹಾಗೂ ಪಕ್ಷ ಗಟ್ಟಿಯಾಗಿರೋದರಿಂದ ಯಾವ ತೊಂದರೆಯೂ ಆಗೋಲ್ಲ ಎಂದು ಸಿಎಂ ಬೊಮ್ಮಾಯಿಯರು ಹೇಳಿದರು.

Ads on article

Advertise in articles 1

advertising articles 2

Advertise under the article