
ಇಬ್ಬರು ಮಾಡೆಲ್ ಗಳಿಗೆ 60,000...! ಸೆಕ್ಸ್ ದಂಧೆಗೆ ನೂಕಿದ ನಟಿ ಹೊಟೆಲ್ ರೂಂನಲ್ಲಿ ಪೊಲೀಸ್ ಕೈಗೆ ಸಿಕ್ಕಿಬಿದ್ದಳು
Tuesday, April 18, 2023
ಮುಂಬೈ: ನಗರದಲ್ಲಿ ನಡೆಯುತ್ತಿದ್ದ ಪ್ರಮುಖ ವೇಶ್ಯಾವಾಟಿಕೆ ದಂಧೆಯನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ ಮತ್ತು ದಂಧೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗಿರುವ ನಟಿ ಹಾಗೂ ಕಾಸ್ಟಿಂಗ್ ನಿರ್ದೇಶಕಿ ಆರತಿ ಮಿತ್ತಲ್ (27) ನನ್ನು ಬಂಧಿಸಲಾಗಿದೆ.
ಆರತಿ ಮಿತ್ತಲ್ ಇತ್ತೀಚೆಗಷ್ಟೇ 'ನಾ ಉಮ್ರಾ ಕಿ ಸೀಮಾ ಹೋ' ಶೋನಲ್ಲಿ ಕಾಣಿಸಿಕೊಂಡಿದ್ದಳು. ತಾನು ಕಾಸ್ಟಿಂಗ್ ನಿರ್ದೇಶಕಿ ಅಂತಲೂ ಹೇಳಿಕೊಂಡಿದ್ದಾಳೆ. ಇದೀಗ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಆರತಿ ಮಿತ್ತಲ್ ನನ್ನು ದಿಂಡೋಶಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಮಾಡೆಲ್‌ಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
READ
- ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ರಾಜ್ಯ ಪೊಲೀಸ್ ಇತಿಹಾಸದಲ್ಲೆ ಗರಿಷ್ಠ ಪ್ರಮಾಣದಲ್ಲಿ 75 ಕೋಟಿ ಮೌಲ್ಯದ ಎಂಡಿಎಂಎ ವಶ ( Video News)
- ಬಾಲಿವುಡ್ ಕಾಸ್ಟ್ ಕೌಚಿಂಗ್, ಸೀಕ್ರೆಟ್ ವಾಟ್ಸ್ಆ್ಯಪ್ ಗ್ರೂಪ್ ಕರಾಳತೆ ಬಿಚ್ಚಿಟ್ಟ ಸ್ಯಾಂಡಲ್ವುಡ್ ನಟಿ ಎರಿಕಾ ಫೆರ್ನಾಂಡೀಸ್
- 6 ವರ್ಷದ ಬಾಲಕನ ಮೇಲೆ ಪಿಟ್ಬುಲ್ ನಾಯಿ ದಾಳಿ : ಮಾಲೀಕನ ವಿರುದ್ಧ ಪ್ರಕರಣ ದಾಖಲು - PIT BULL DOG ATTACK ON BOY (VIDEO NEWS)
ಸ್ಥಳೀಯ ಮಾಧ್ಯಮ ವರದಿಯನ್ವಯ ಪೊಲೀಸರು ಗ್ರಾಹಕರ ಸೋಗಿನಲ್ಲಿ ಆರತಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಪೋಲೀಸ್ ಪೇದೆಯೊಬ್ಬರು ಗ್ರಾಹಕನ ಸೋಗಿನಂತೆ ಆರತಿ ಬಳಿ ತೆರಳಿದ್ದಾರೆ. ತನ್ನಿಬ್ಬರು ಸ್ನೇಹಿತರಿಗೆ ಇಬ್ಬರು ಹುಡುಗಿಯರನ್ನು ಕೇಳಿದ್ದಾರೆ. ಅದಕ್ಕೆ ಆರತಿ ಸಮ್ಮತಿಸಿ 60,000 ರೂ. ಬೇಡಿಕೆ ಇಟ್ಟಿದ್ದಳು. ಅಷ್ಟೇ ಅಲ್ಲದೆ, ಪೇದೆಯ ಫೋನ್‌ಗೆ ಇಬ್ಬರು ಯುವತಿಯರ ಫೋಟೋಗಳನ್ನು ಆರತಿ ಕಳುಹಿಸಿದ್ದಾಳೆ. ಆ ಇಬ್ಬರು ಮಾಡೆಲ್‌ಗಳನ್ನು ಜುಹು ಅಥವಾ ಗೋರೆಗಾಂವ್ ಮೂಲದ ಹೋಟೆಲ್‌ಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದೆ.
ಬಳಿಕ ಪೊಲೀಸರು ಗೋರೆಗಾಂವ್‌ನ ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ. ಆರತಿ ಮಿತ್ತಲ್ ಇಬ್ಬರು ಮಾಡೆಲ್‌ಗಳೊಂದಿಗೆ ಬಂದಾಗ, ಅವಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಉತ್ತಮ ಕೆಲಸ ಹಾಗೂ ಹಣದ ಭರವಸೆ ನೀಡಿ ಮನವೊಲಿಸಿ ನಮ್ಮನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿವಂತೆ ಮಾಡಿದ್ದಾಳೆಂದು ಮಾಡೆಲ್‌ಗಳಿಬ್ಬರು ಆರತಿ ವಿರುದ್ಧ ಆರೋಪ ಮಾಡಿದ್ದಾರೆ. ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರತಿ, ನಟಿ ರಾಜಶ್ರೀ ಠಾಕೂರ್ ರೊಂದಿಗೆ 'ಅಪ್ಪಾಪನ್' ಶೋನಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ 'ನಾ ಉಮ್ರಾ ಕಿ ಸೀಮಾ ಹೋ' ಸೆಟ್‌ನಿಂದ ವೀಡಿಯೊವನ್ನು ಹಂಚಿಕೊಂಡಿದ್ದರು. ಇದಲ್ಲದೆ, ಕೆಲವು ದಿನಗಳ ಹಿಂದೆ ಅವರು ನಟ ಆರ್ ಮಾಧವನ್ ಅವರೊಂದಿಗೆ ಚಿತ್ರದ ಚಿತ್ರೀಕರಣದಲ್ಲಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು.