ಬಿಜೆಪಿ 'ಯುವ' ಧ್ಯಾನ: ಮೋದಿ-ಶಾ ಪ್ರಯೋಗ, ಸ್ಥಳೀಯ ವರ್ಚಸ್ವೀ ನಾಯಕರಿಗೆ ಮಣೆ
ಬಿಜೆಪಿ 'ಯುವ' ಧ್ಯಾನ: ಮೋದಿ-ಶಾ ಪ್ರಯೋಗ, ಸ್ಥಳೀಯ ವರ್ಚಸ್ವೀ ನಾಯಕರಿಗೆ ಮಣೆ
ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ನಿರತವಾಗಿದೆ. ಈ ಪ್ರಕ್ರಿಯೆಗೆ ಅಮಿತ್ ಶಾ ಭೇಟಿ ಮಿಂಚಿನ ಸಂಚಲನ ಉಂಟು ಮಾಡಿದೆ.
140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ನೀಡುವ ಬಗ್ಗೆ ಅಮಿತ್ ಶಾ ಪ್ರಸ್ತಾಪ ಮಾಡಿದ್ದು, ಯುವಕರಿಗೆ ಮಣೆ ಹಾಕುವುದು ಹಾಗೂ ಸ್ಥಳೀಯ ವರ್ಚಸ್ವೀ ನಾಯಕರಿಗೆ ಮಣೆ ಹಾಕುವ ಪ್ರಸ್ತಾಪವನ್ನು ಇಟ್ಟಿದ್ದಾರೆ. ಈ ಪ್ರಸ್ತಾಪಕ್ಕೆ ಸ್ವತಃ ಆರ್‌ಎಸ್‌ಎಸ್ ನಾಯಕರೇ ದಂಗಾಗಿ ಹೋಗಿದ್ದಾರೆ.
ಇದರಿಂದ ಯುವ ನಾಯಕರ ಮನದಲ್ಲಿ ಹೊಸ ಆಕಾಂಕ್ಷೆ ಗರಿಗೆದರಿದ್ದು, ಮೋದಿ-ಶಾ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಹೊಸ ತಿರುವಿಗೆ ಕಾರಣವಾಗಲಿದೆ.
ಶೇಕಡಾ 60ರಷ್ಟು ಕ್ಷೇತ್ರಗಳಲ್ಲಿ ಹೊಸಬರಿಗೆ, ಯುವಕರಿಗೆ ಹಾಗೂ ಸ್ಥಳೀಯ ವರ್ಚಸ್ವೀ ನಾಯಕರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಈ ನಿರ್ಧಾರ ಸ್ಥಳೀಯ ಹಾಲಿ ಹಾಗೂ ಮಾಜಿ ಶಾಸಕರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಸ್ಥಳೀಯವಾಗಿ ವರ್ಚಸ್ಸು ಕಳೆದುಕೊಂಡಿರುವ ಹಾಗೂ ವಿವಿಧ ಪಕ್ಷಗಳ ಜೊತೆಗೆ ಹೊಂದಾಣಿಕೆ ರಾಜಕೀಯ ಮಾಡುವ ಹಳಬರನ್ನು ಬದಲಾಯಿಸಿ ಹೊಸಬರಿಗೆ ಟಿಕೆಟ್ ಘೋಷಣೆ ಮಾಡುವಂತೆ ಶಾ ಮಹತ್ವದ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ.
ಶಾ ಅವರ ಖಡಕ್ ನಿರ್ಧಾರ ಸಭೆಯಲ್ಲಿ ಎಲ್ಲರನ್ನೂ ಅಚ್ಚರಿ ಚಕಿತರನ್ನಾಗಿ ಮಾಡಿದೆ.