-->
ಕೊನೆಗೂ ಪೊಲೀಸ್ ಕೈಗೆ ಸಿಕ್ಕಿಬಿದ್ದ ಖಲಿಸ್ಥಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್

ಕೊನೆಗೂ ಪೊಲೀಸ್ ಕೈಗೆ ಸಿಕ್ಕಿಬಿದ್ದ ಖಲಿಸ್ಥಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್



ಚಂಡೀಗಢ: ಪೊಲೀಸರಿಗೇ ಚಳ್ಳೇಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ ಖಲಿಸ್ಥಾನಿ ನಾಯಕ ಅಮೃತ್ ಪಾಲ್ ಸಿಂಗ್ ಒಂದು ತಿಂಗಳ ಹುಡುಕಾಟದ ಬಳಿಕ ಕೊನೆಗೂ ಪಂಜಾಬ್ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾನೆ. ಪಂಜಾಬ್ ನ ಮೋಗಾದಲ್ಲಿ ಅಮೃತ್ ಪಾಲ್ ಸಿಂಗ್ ನನ್ನು ವಶಕ್ಕೆ ಪಡೆಯಲಾಗಿದೆ.

'ವಾರಿಸ್ ಪಂಜಾಬ್ ದೆ' ಸಂಘಟನೆಯ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಕಳೆದೊಂದು ತಿಂಗಳಿನಿಂದ ಪೊಲೀಸ್ ಕಣ್ಣು ತಪ್ಪಿಸಿ ಓಡಾಡಿಕೊಂಡಿದ್ದ. ಮಾರ್ಚ್ 18ರಂದು ಪೊಲೀಸರು ಅಮೃತ್ ಪಾಲ್ ಸಿಂಗ್ ನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಈತ ಜಲಂಧರ್ ಜಿಲ್ಲೆಯಲ್ಲಿ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡು, ವಾಹನಗಳನ್ನು ಬದಲಿಸಿ ಸಿನಿಮೀಯ ರೂಪದಲ್ಲಿ ಅಮೃತ್ ಪಾಲ್ ಎಸ್ಕೇಪ್ ಆಗಿದ್ದ.


ಎಪ್ರಿಲ್ 20ರಂದು ಅಮೃತ್ ಪಾಲ್ ಸಿಂಗ್ ಪತ್ನಿ ಕಿರಣ್‌ ದೀಪ್ ಕೌರ್ ರೊಂದಿಗೆ ಲಂಡನ್‌ ಪರಾರಿಯಾಗಲು ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದರು‌. ಈ ವೇಳೆ ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದು ಪ್ರಶ್ನೆ ಮಾಡಿದ್ದರು. ಬಳಿಕ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅಮೃತ್ ಪಾಲ್ ಸಿಂಗ್ ಖಲಿಸ್ತಾನಿ - ಪಾಕಿಸ್ತಾನಿ ಏಜೆಂಟ್ ಎಂಬುದು ಸರಕಾರದ ಗುಮಾನಿ. ಕೆಲ ವರ್ಷಗಳಿಂದ ಪಂಜಾಬ್ ನಲ್ಲಿ ನೆಲೆಸಿದ್ದ ಈತ ಸಶಸ್ತ್ರ ಬೆಂಬಲಿಗರ ಬೆಂಗಾವಲು ಹೊಂದಿದ್ದ. ಈತ ಖಲಿಸ್ತಾನಿ ಹೋರಾಟಗಾರ ಜರ್ನೈಲ್ ಸಿಂಗ್ ಬಿಂದ್ರಾವಾಲೆಯ ಬೆಂಬಲಿಗನಾಗಿದ್ದ ಎನ್ನಲಾಗಿದೆ. ಈತ 'ಬಿಂದ್ರಾವಾಲೆ 2.0' ಎಂದೇ ಜನಪ್ರಿಯನಾಗಿದ್ದ.



Ads on article

Advertise in articles 1

advertising articles 2

Advertise under the article