ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಡೀಲ್ ನಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ
Friday, April 21, 2023
ಆತ್ಮಶಕ್ತಿ ವಿವಿದೊದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ 50 ನೇ ಉಚಿತ ಬೃಹತ್ ಅರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಎಪ್ರಿಲ್ 23 ರವಿವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ "ಆತ್ಮಶಕ್ತಿ ಸೌಧ, ಬೈರಾಡಿಕೆರೆ ಹತ್ತಿರ, ಪಡೀಲ್, ಮಂಗಳೂರು ನಲ್ಲಿ ಆಯೋಜಿಸಲಾಗಿದೆ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.)ಅಧ್ಯಕ್ಷ ಚಿತ್ತರಂಜನ್ ಬೋಳಾರ್ ತಿಳಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು ಶಿಬಿರವು ಜಲೇಖಾ ಯೆನೆಪೋಯ ಇನ್ಸಿಟ್ಯೂಟ್ ಆಫ್ ಒಂಕೋಲಜಿ ಮತ್ತು ಸಮುದಾಯ ದಂತ ವಿಭಾಗ, ದಂತ ಕಾಲೇಜು ಮತ್ತು ಆಸ್ಪತ್ರೆ, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ, ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಶನ್ ಆಸ್ಪತ್ರೆ, ಮಂಗಳೂರು ಆಯೋಜಿಸಲಾಗಿದೆ. ದ.ಕ. ಇವರ ಸಹಯೋಗದೊಂದಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಈ ವೈದ್ಯಕೀಯ ಶಿಬಿರದಲ್ಲಿ ತಜ್ಞ ವೈದ್ಯರು ಗಳಿಂದ ಕಾನ್ಸರ್ ಹಾಗೂ ಇತರ ಕಾಯಿಲೆಗಳ ಕುರಿತು ಮಾಹಿತಿ ಕಾರ್ಯಗಾರದ ಜೊತೆ ಪ್ಯಾಪ್ ಸ್ಮಿಯರ್ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ, ಮ್ಯಾಮೊಗ್ರಾಮ್, ರಕ್ತದಲ್ಲಿ ಸಕ್ಕರೆ ತಪಾಸಣೆ, ಬಾಯಿಯ ಪರೀಕ್ಷೆ, ಉಚಿತವಾದ ದಂತ ತಪಾಸಣೆ ಹಾಗೂ ದಂತ ವೈದ್ಯರ ಸಲಹೆ, ಹಲ್ಲುಗಳ ಶುಚೀಕರಣ, ಬಹಳ ಕೆಟ್ಟಿರುವ ಮತ್ತು ಚಿಕಿತ್ಸೆಗೆ ಒಳಪಡದ ಹಲ್ಲುಗಳನ್ನು ಕೀಳಿಸುವುದು, ಚಿಕಿತ್ಸೆಗೆ ಒಳಪಡುವ ಹಲ್ಲುಗಳನ್ನು ತುಂಬಿಸುವುದು, ಹಸಿರು ಕಾರ್ಡನ್ನು ಶಿಬಿರಾರ್ಥಿಗಳಿಗೆ ನೀಡಿವುದು, ಮಕ್ಕಳ ದಂತ ತಪಾಸಣೆ ಮತ್ತು ಚಿಕಿತ್ಸೆ, ದಂತ ಭಾಗ್ಯ ಯೋಜನೆಯಡಿಯಲ್ಲಿ ಉಚಿತವಾಗಿ ದಂತ ಪಂಕ್ತಿಯನ್ನು ನೀಡಲಾಗುವುದು, ನೇತ್ರ ವಿಭಾಗ, ಸಾಮಾನ್ಯ ವೈದ್ಯಕೀಯ ವಿಭಾಗ, ಬಿಪಿ ಮತ್ತು ರಕ್ತದೊತ್ತಡ ತಪಾಸಣೆ, ಇ.ಸಿ.ಜಿ, ಚರ್ಮ ವಿಭಾಗ, ಮೂಳೆ ಮತ್ತು ಎಲುಬು ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ, ಅಗತ್ಯವುಳ್ಳವರಿಗೆ ಉಚಿತ ಕನ್ನಡಕ ನೀಡಲಾಗುವುದು ಎಂದರು.
ಪಾರ್ಶ್ವವಾಯು, ಹೃದಯ ಸಂಬಂಧಿ, ಸಂಧಿವಾತ, ನರರೋಗ, ಬೆನ್ನು ನೋವು, ಕುತ್ತಿಗೆ ನೋವು, ಶೀತ, ಕೆಮ್ಮು, ದಮ್ಮು, ಅಲರ್ಜಿ, ತಲೆನೋವು, ಕಣ್ಣು, ಕಿವಿ, ಮೂಗು, ಗಂಟಲು ಸಂಬಂಧಿ ಕಾಯಿಲೆಗಳು, ತುರಿಕೆ, ಕಜ್ಜಿ, ಸೋರಿಯಾಸಿಸ್ ಮುಂತಾದ ಚರ್ಮ ರೋಗಗಳು, ಗ್ಯಾಸ್ಟಿಕ್, ಅಜೀರ್ಣ, ವಾಂತಿ, ಅತಿಸಾರ ಮುಂತಾದ ಉದರ ಸಂಬಂಧಿ ಕಾಯಿಲೆಗಳು, ಪೈಲ್ಸ್, ಫಿಸ್ತುಲಾ, ಪಿಷರ್‌ಗಳಂತಹ ಗುದ ಸಂಬಂಧಿ ರೋಗಗಳು, ಮಕ್ಕಳಿಗೆ ಹಾಗೂ ಸ್ತ್ರೀಯರಿಗೆ ಸಂಬಂಧಿಸಿದ ರೋಗಗಳ ಸೇವೆಗಳು ಲಭ್ಯವಿದೆ ಎಂದರು.
ಆತ್ಮಶಕ್ತಿ ಆರೋಗ್ಯ ಶಿಬಿರದ ಮಹತ್ವಗಳು
ಸಂಘವು ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಟ್ಟ 29 ಶಾಖೆಗಳನ್ನು ಹೊಂದಿದ್ದು ಬ್ಯಾಂಕಿಂಗ್ ಸೇವೆಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಕಳೆದ ಹತ್ತು ವರ್ಷದಿಂದ ಜನರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಸಂಘವು 40 ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಜಂಟಿಯಾಗಿ ಆ ಯೋಜನೆ ಮಾಡಿ ಸುಮಾರು 1000ಕ್ಕೂ ಮಿಕ್ಕಿ ಜನರಿಗೆ ಉಚಿತ ಆರೋಗ್ಯ ತಪಾಸಣೆ ಉಚಿತ ಶಸ್ತ್ರ ಚಿಕಿತ್ಸೆಗಳ ವ್ಯವಸ್ಥೆ ಉಚಿತ ಕನ್ನಡಕ ವಿತರಣೆ ಹಾಗೂ 300 ಕ್ಕೂ ಮಿಕ್ಕಿ ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ.
ಈ ಶಿಬಿರದಲ್ಲಿ ಸಂಘ ಸಂಸ್ಥೆಗಳು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಬಿಲ್ಲವ ಸೇವಾ ಸಮಾಜ (ರೂ.) ಕಂಕನಾಡಿ ಗರೋಡಿ, ಯುವವಾಹಿನಿ (ರಿ.) ಮಂಗಳೂರು.ಮಹಿಳಾ ಘಟಕ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.)ಕಂಕನಾಡಿ ನಗರ, ಯೂತ್ ಸೆಂಟರ್ (ರಿ.) ಪಟೇಲ್, ಯೂತ್ ಸೆಂಟರ್ ಮಹಿಳಾ ಮಂಡಲ, ಪಡೀಲ್ ಮಂಗಳೂರು, ನ್ಯೂ ಫ್ರೆಂಡ್ಸ್ ಕ್ಲಬ್ (ರಿ.) ಪಡೀಲ್, ಮಂಗಳೂರು, ಶ್ರೀ ಪ್ರಶಾಂತಿ ಮಹಿಳಾ ಮಂಡಳಿ (ರಿ.) ಸೋನಲಿಕೆ, ಬಜಾಲ್ ಇವರ ಸಹಭಾಗಿತ್ವದಲ್ಲಿ ನಡೆಯಲಿದೆ.
ಸಂಘದ ಸದಸ್ಯರು ಮತ್ತು ಸಾರ್ವಜನಿಕ ರು ಹೆಚ್ಚಿನ ಸಂಖ್ಯೆಯ ಆಗಮಿಸಿ ಸದುಪಯೋಗ ಪಡೆಯಬೇಕಾಗಿ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗವನ್ನು ಬೋಳಾರ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಪ್ರೊ.(ಡಾ|)ಎಮ್.ವಿಜಯ್ ಕುಮಾರ್, (ಉಪಕುಲಪತಿ, ಯೆನಪೋಯ ವಿಶ್ವವಿಧ್ಯಾನಿಲಯ ,ಪ್ರೊಫೆಸರ್ ಸರ್ಜಿಕಲ್ ಆಂಕೊಲಾಜಿ)
ಸಿ.ಎ ಶಾಂತರಾಮ್ ಶೆಟ್ಟಿ, (ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ,ಲೇಡಿಗೋಶನ್ ಅಸ್ಪತ್ರೆ,ಮಂಗಳೂರು). ನೇಮಿರಾಜ್ . ಪಿ. (ಉಪಾಧ್ಯಕ್ಷರು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.)) ಸೌಮ್ಯ ವಿಜಯ್, (ಮುಖ್ಯಕಾರ್ಯನಿರ್ವಹಣಾಧಿಕಾರಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ) ಗೋಪಾಲ್ ಎಮ್.,(ಕಾರ್ಯದರ್ಶಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್(ರಿ.)) ಸರಸ್ವತಿ ಎಸ್.ಕೆ, (ಅಧ್ಯಕ್ಷರು, ಯುವವಾಹಿನಿ (ರಿ.) ಮಂಗಳೂರು.ಮಹಿಳಾ ಘಟಕ) ಉದಯ.ಕೆ. ಪಿ (ಅಧ್ಯಕ್ಷರು ಯೂತ್ ಸೆಂಟರ್ (ರಿ.) ಪಡೀಲ್, ಮಂಗಳೂರು) ರಾಮನಾಥ್ ಸನಿಲ್, (ನಿರ್ದೇಶಕರು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.)) ಉಪಸ್ಥಿತರಿದ್ದರು.