
ಮದುವೆ ಮಂಟಪದಲ್ಲಿಯೇ ಪರಸ್ಪರ ಜುಟ್ಟು ಹಿಡಿದು ಕಿತ್ತಾಡಿಕೊಂಡ ವಧು - ವರರು
Thursday, April 20, 2023
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆಯ ವೀಡಿಯೋ ಮತ್ತು ಫೋಟೋಗಳು ಟ್ರೆಂಡ್ ಸೆಟ್ ಆಗಿದ್ದು, ಈ ವೀಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿರುತ್ತವೆ. ಆದರೆ ಇಲ್ಲೊಂದು ಜೋಡಿ ಮದುವೆ ಮಂಟಪದಲ್ಲಿ ಪರಸ್ಪರ ಸಿಹಿ ತಿನ್ನಿಸುವ ಸಮಯದಲ್ಲಿ ಕಿತ್ತಾಡಿಕೊಂಡಿರುವ ವೀಡಿಯೋವೊಂದು ವೈರಲ್ ಆಗಿದೆ.
ಸಾಮಾನ್ಯ ವಿವಾಹವಾಗುತ್ತಿರುವ ಮನೆಯ ವಾತಾವರಣ ಬಹಳ ಸುಂದರ, ಸಂಭ್ರಮದಿಂದ ಕೂಡಿರುತ್ತದೆ. ಆದರೆ ಇಲ್ಲೊಂದು ಮದುವೆ ಮಂಟಪದಲ್ಲಿ ಖುಷಿಯ ಬದಲು ಸಂಪೂರ್ಣ ಗಲಾಟೆ, ಗದ್ದಲವೇ ತುಂಬಿಕೊಂಡಿದೆ. ಮಂಟಪದಲ್ಲೇ ವಧು-ವರರೂ ಜುಟ್ಟು ಹಿಡ್ಕೊಂಡು ಕಿತ್ತಾಡಿಕೊಂಡಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
READ
- ಬಾಲಿವುಡ್ ಕಾಸ್ಟ್ ಕೌಚಿಂಗ್, ಸೀಕ್ರೆಟ್ ವಾಟ್ಸ್ಆ್ಯಪ್ ಗ್ರೂಪ್ ಕರಾಳತೆ ಬಿಚ್ಚಿಟ್ಟ ಸ್ಯಾಂಡಲ್ವುಡ್ ನಟಿ ಎರಿಕಾ ಫೆರ್ನಾಂಡೀಸ್
- 6 ವರ್ಷದ ಬಾಲಕನ ಮೇಲೆ ಪಿಟ್ಬುಲ್ ನಾಯಿ ದಾಳಿ : ಮಾಲೀಕನ ವಿರುದ್ಧ ಪ್ರಕರಣ ದಾಖಲು - PIT BULL DOG ATTACK ON BOY (VIDEO NEWS)
- ಐನ್ಸ್ಟೈನ್ ಮೆದುಳು ಕದ್ದು 240ಪೀಸ್ ಮಾಡಿ ಮೊಮ್ಮಗಳಿಗೆ ಉಡುಗೊರೆ ನೀಡಿದ ವೈದ್ಯ: ವಿಜ್ಞಾನಿಯ ರೋಚಕ ಕಥೆ ಇಲ್ಲಿದೆ
ವರನು ವಧುವಿಗೆ ಸಿಹಿತಿಂಡಿಯನ್ನು ತಿನ್ನಿಸಲು ಬಲವಂತವಾಗಿ ಪ್ರಯತ್ನಿಸಿದ್ದಾನೆ. ಪರಿಣಾಮ ಕೋಪಗೊಂಡ ವಧು, ವರನ ಕೈಗೆ ಹೊಡೆಯುತ್ತಾಳೆ. ಇದರಿಂದ ವರ ಕೋಪಗೊಂಡು ವಧುವಿನ ಮುಖಕ್ಕೆ ಹೊಡೆಯಲು ಪ್ರಾರಂಭಿಸುತ್ತಾನೆ. ಬಳಿಕ ದಂಪತಿ ಒಬ್ಬರನ್ನೊಬ್ಬರು ತಳ್ಳುತ್ತಾರೆ ಮತ್ತು ಒಬ್ಬರ ಮೇಲೊಬ್ಬರು ಗುದ್ದುತ್ತಾರೆ. ಸಂಬಂಧಿಕರು ಮಧ್ಯಪ್ರವೇಶಿಸಿ ಅವರನ್ನು ತಡೆದು ಅವರ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದಾಗ್ಯೂ, ವಧು ಮತ್ತು ವರರು ಪರಸ್ಪರ ಕೂದಲನ್ನು ಎಳೆದಾಡಿಕೊಂಡು ಜಗಳ ಮುಂದುವರೆಸುತ್ತಾರೆ.
ಈ ಕಿತ್ತಾಟದಿಂದ ಮದುವೆ ಮನೆ ಸಂಪೂರ್ಣ ರಣರಂಗವಾಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ವಿವಿಧ ಕಮೆಂಟ್ ಮಾಡುತ್ತಿದ್ದಾರೆ.