ಮಂಗಳೂರು ಉತ್ತರದಲ್ಲಿ ಕಳಪೆ ಕಾಮಗಾರಿ: ತಿಂಗಳ ಹಿಂದೆ ಹಾಕಿದ ಕಾಂಕ್ರೀಟ್ ಒಡೆದು ಮತ್ತೆ ರಿಪೇರಿ
ಮಂಗಳೂರು ಉತ್ತರದಲ್ಲಿ ಕಳಪೆ ಕಾಮಗಾರಿ: ತಿಂಗಳ ಹಿಂದೆ ಹಾಕಿದ ಕಾಂಕ್ರೀಟ್ ಒಡೆದು ಮತ್ತೆ ರಿಪೇರಿ
ಮಂಗಳೂರು ಉತ್ತರ ಕ್ಷೇತ್ರದ ಭಾಗವಾಗಿರುವ ಲ್ಯಾಂಡ್ ಲಿಂಕ್ಸ್ ಬಳಿ ಇರುವ ಬುದ್ಧ ಕೆಫೆ ಹಾಗೂ ರವಿಶಂಕರ ವಿದ್ಯಾಕೇಂದ್ರದ ಮಧ್ಯೆ ಹಾಕಲಾಗಿರುವ ಕಾಂಕ್ರೀಟ್ ಕಳಪೆ ಕಾಮಗಾರಿಯಿಂದ ಕೂಡಿದ್ದು, ಸ್ಥಳೀಯ ಜನತೆಯ ಹಿಡಿಶಾಪಕ್ಕೆ ತುತ್ತಾಗಿದೆ.
ಈ ರಸ್ತೆಯಲ್ಲಿ ಹಾಕಿದ ಕಾಂಕ್ರೀಟ್ ಕೆಲವೇ ದಿನಗಳಲ್ಲಿ ಸಂಪೂರ್ಣ ಹದಗೆಟ್ಟಿದ್ದು, ಕಾಂಕ್ರೀಟ್ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ದುಸ್ತರವಾಗಿದೆ. ವ್ಯಾಪಕ ಆಕ್ರೋಶ, ಜನರ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕಳಪೆ ಕಾಮಗಾರಿಯನ್ನು ಸರಿಪಡಿಸಲು ಮತ್ತೆ ದುರಸ್ತಿ ಕಾರ್ಯ ಆರಂಭವಾಗಿದೆ.
ಶಾರ್ಪ್ ತಿರುವು ಹೊಂದಿರುವ ಈ ಕಾಂಕ್ರೀಟ್ ರಸ್ತೆಯ ಮೇಲ್ಭಾಗವನ್ನು ಮತ್ತೆ ಚಿಪ್ ಮಾಡಲಾಗಿದ್ದು, ಮತ್ತೊಮ್ಮೆ ಕಾಂಕ್ರೀಟ್ ಹಾಕಲಾಗುತ್ತಿದೆ.
ಇದೊಂದು ಅಷ್ಟೊಂದು ಜನ ವಸತಿ ಇಲ್ಲದ ಈ ಪ್ರದೇಶ. ಆದರೆ, ಈ ರಸ್ತೆ ದೇರೆಬೈಲ್ ಕೊಂಚಾಡಿಗೂ ಯೆಯ್ಯಾಡಿ ಕೊಂಚಾಡಿಗೂ ಸಂಪರ್ಕ ರಸ್ತೆಯಾಗಿ ಬಹುತೇಕ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ.
ಇಲ್ಲಿ ಕಾಂಕ್ರೀಟ್ ಹಾಕಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸ್ಥಳೀಯ ಕಾರ್ಪೊರೇಟರ್ ಆದಿಯಾಗಿ ಜನಪ್ರತಿನಿಧಿಗಳು ದೊಡ್ಡ ಪ್ರಮಾಣದ ಕಿಕ್ ಬ್ಯಾಕ್ ಪಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಭ್ರಷ್ಟಾಚಾರ ನಡೆದಿಲ್ಲ ಎಂದಾದರೆ ಈ ಗುತ್ತಿಗೆದಾರರನ್ನು ದಬಾಯಿಸಿ ಮತ್ತೊಮ್ಮೆ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ಹಾಕಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ.
ಇದು ಜನಗಳ ತೆರಿಗೆ ಹಣದಿಂದ ನಡೆದಿರುವ ಕಾಮಗಾರಿ. ಜನರ ಪ್ರಯೋಜನಕ್ಕೆ ಬರಬೇಕು. ಅದನ್ನು ಬಿಟ್ಟು ಜನಪ್ರತಿನಿಧಿಗಳು ತಾನೊಂದು ದೊಡ್ಡ ಸಾಧನೆ ಮಾಡಿದ್ದೆನೆ ಎಂದು ಮೆರೆಯಲು ಇಂತಹ ಕಾಮಗಾರಿಗಳನ್ನು ಪ್ರಚಾರಕ್ಕೆ ಬಳಸಲಾಗುತ್ತದೆ.
ಇತ್ತೀಚೆಗೆ ನಡೆದ ಅದೆಷ್ಟೋ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ದೂರುಗಳು ಕೇಳಿಬಂದಿವೆ. ಅವುಗಳ ಪೈಕಿ ಈ ಕಾಮಗಾರಿಯೂ ಒಂದಾಗಿದೆ.
.