ಸಂಜೀವ ಮಠಂದೂರು, ಅಂಗಾರ ಗೆ ಕೊಕ್- ಸುಳ್ಯ, ಪುತ್ತೂರಿನಲ್ಲಿ BJP ಗೆ ಮಹಿಳಾ ಕ್ಯಾಂಡಿಡೇಟ್
Tuesday, April 11, 2023
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ ಪುತ್ತೂರು ಮತ್ತು ಸುಳ್ಯದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೈ ಬಿಡಲಾಗಿದೆ.
ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಆಶಾ ತಿಮ್ಮಪ್ಪ ಅವರನ್ನು ಆಯ್ಕೆ ಮಾಡಲಾಗಿದ್ದರೆ, ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಮತ್ತು ಸುಳ್ಯ ಕ್ಷೇತ್ರದ ಶಾಸಕ , ಸಚಿವ ಅಂಗಾರ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಪುತ್ತೂರು ಕ್ಷೇತ್ರದ ಸಂಜೀವ ಮಠಂದೂರು ಅವರಿಗೆ ಕಾರ್ಯಕರ್ತರ ಭಾರಿ ವಿರೋಧ ಮತ್ತು ಸುಳ್ಯದ ಅಂಗಾರ ಅವರಿಗೆ ಅಭಿವೃದ್ಧಿ ಮಾಡದ ಕಾರಣಕ್ಕೆ ಕ್ಷೇತ್ರದ ಜನರ ವಿರೋಧ ವ್ಯಕ್ತವಾಗಿತ್ತು.