ಮೂಡಬಿದಿರೆಯಲ್ಲಿ ಶಾಸಕ ಉಮನಾಥ ಕೋಟ್ಯಾನ್ BJP ಟಿಕೆಟ್ ಇಲ್ಲ?
Monday, April 10, 2023
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ತಿಂಗಳಷ್ಟೆ ಬಾಕಿ ಇದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿಲ್ಲ. ಇಂದು ರಾತ್ರಿಯೊಳಗೆ BJP ಪಟ್ಟಿ ಹೊರಬೀಳಲಿದೆ.
ಇದರ ನಡುವೆ ಕೆಲ ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಕೈತಪ್ಪುತ್ತದೆ ಎಂಬ ಸುದ್ದಿ ಇದೆ. ಇದರಲ್ಲಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮನಾಥ ಕೋಟ್ಯಾನ್ ಅವರಿಗೂ ಟಿಕೆಟ್ ತಪ್ಪಲಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ಮೂಡಬಿದಿರೆಯಲ್ಲಿ 2018 ರಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತ್ತು. ಮೂಡಬಿದಿರೆಯ ಮೊದಲ ಬಿಜೆಪಿ ಶಾಸಕರಾಗಿದ್ದ ಉಮನಾಥ ಕೋಟ್ಯಾನ್ ಎರಡನೇ ಅವಧಿಗೆ ಟಿಕೆಟ್ ಪಡೆಯುವಲ್ಲಿ ವಿಫಲರಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಮೂಡಬಿದಿರೆ ಕ್ಷೇತ್ರದಿಂದ ಬಿಜೆಪಿ ಯಿಂದ ಸ್ಪರ್ಧಿಸಲು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹಲವು ಸಮಯಗಳಿಂದ ಪ್ರಯತ್ನ ಪಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅತ್ಯಾಪ್ತರಾಗಿರುವ ಸುದರ್ಶನ್ ಮೂಡಬಿದಿರೆ ಈ ಬಾರಿ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಮಾತುಗಳು ಕೇಳಿ ಬರುತ್ತಿದೆ.
ಮೂಡಬಿದಿರೆಯಲ್ಲಿ ಕಾಂಗ್ರೆಸ್ ಕೋಟೆಯಲ್ಲಿ ಕಳೆದ ಬಾರಿ ಬಿಜೆಪಿ ವಿಜಯ ಪತಾಕೆ ಹಾರಿಸಿತ್ತು. ಸಂಘಟನಾತ್ಮಕವಾಗಿ ಬಲಿಷ್ಠವಾಗಿರುವ ಮೂಡಬಿದಿರೆಯಲ್ಲಿ ಬದಲಾವಣೆ ಮಾಡಲು ವರಿಷ್ಠರು ನಿರ್ಧರಿಸಿದಂತಿದೆ. ಯಾವುದಕ್ಕೂ ಬಿಜೆಪಿ ಬಿಡುಗಡೆ ಮಾಡುವ ಪಟ್ಟಿ ಕುತೂಹಲ ಮೂಡಿಸಿದೆ.
ಮೂಡಬಿದಿರೆ ಕ್ಷೇತ್ರ ಪ್ರತಿನಿಧಿಸಿದವರು
1962- ಗೋಪಾಲ್ ಸಾಲಿಯಾನ್ - ಸ್ವತಂತ್ರ
1967- ರತನ್ ಕುಮಾರ್ ಕಟ್ಟೆಮಾರ್- ಸ್ವತಂತ್ರ
1972- ದಾಮೋದರ ಮೂಲ್ಕಿ- ಕಾಂಗ್ರೆಸ್
1978- ದಾಮೋದರ ಮೂಲ್ಕಿ- ಕಾಂಗ್ರೆಸ್
1983- ಕೆ ಅಮರನಾಥ ಶೆಟ್ಟಿ- ಜನತಾ ಪಾರ್ಟಿ
1985- ಕೆ ಅಮರನಾಥ ಶೆಟ್ಟಿ- ಜನತಾ ಪಾರ್ಟಿ
1989- ಕೆ ಸೋಮಪ್ಪ ಸುವರ್ಣ- ಕಾಂಗ್ರೆಸ್
1994- ಅಮರನಾಥ ಶೆಟ್ಟಿ ಕೆ- ಜನತಾದಳ
1999-ಕೆ ಅಭಯಚಂದ್ರ- ಕಾಂಗ್ರೆಸ್
2004- ಕೆ ಅಭಯ ಚಂದ್ರ- ಕಾಂಗ್ರೆಸ್
2008- ಕೆ ಅಭಯಚಂದ್ರ- ಕಾಂಗ್ರೆಸ್
2013- ಕೆ ಅಭಯಚಂದ್ರ- ಕಾಂಗ್ರೆಸ್
2018- ಉಮಾನಾಥ ಎ ಕೋಟ್ಯಾನ್- ಬಿಜೆಪಿ