ಆಸ್ಟ್ರೇಲಿಯಾ ಸಿಡ್ನಿಯ ಶಾಸಕಿಯಾಗಿ ಕೊಡಗು ಮೂಲದ ಚರಿಷ್ಮಾ ಆಯ್ಕೆ
Saturday, April 8, 2023
ಮಡಿಕೇರಿ: ಭಾರತೀಯರು ಹೊರದೇಶಗಳಲ್ಲಿ ಸಾಧನೆ ಮಾಡೋದು ಹೊಸದೇನಲ್ಲ. ಪ್ರಪಂಚದ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರು ವೈದ್ಯಕೀಯ, ಇಂಜಿನಿಯರಿಂಗ್, ವಿಜ್ಞಾನ ಕ್ಷೇತ್ರಗಳಲ್ಲಿ ಬಹಳ ಎತ್ತರದ ದೇಶವೇ ಮೆಚ್ಚುವಂತಹ ಸಾಧನೆಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಬೇರೆ ದೇಶಗಳ ರಾಜಕೀಯ ಕಣದಲ್ಲೂ ಭಾರತೀಯರು ಸಾಧನೆ ಮಾಡಿರೋದನ್ನು ನಾವು ಕಂಡಿದ್ದೇವೆ.
ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ದಂಪತಿಗಳ ಅಳಿಯ, ಭಾರತೀಯ ಮೂಲದ ರಿಷಿ ಸುನಾಕ್ ಅವರು ಬ್ರಿಟನ್ ಪ್ರಧಾನಿಯಾಗಿ ಭಾರತದ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಯುನೈಟೆಡ್ ಸ್ಟೇಟ್ಸ್ ನ 49ನೇ ಉಪಾಧ್ಯಕ್ಷೆಯಾಗಿದ್ದಾರೆ. ಇದೀಗ ಆ ಸಾಲಿಗೆ ಕೊಡಗಿನ ಚರಿಷ್ಮಾ ಅವರು ಸೇರ್ಪಡೆಯಾಗಿದ್ದಾರೆ. ಇವರು ಆಸ್ಟ್ರೇಲಿಯಾದ ಸಿಡ್ನಿಯ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
ಮಾ.25ರಂದು ಆಸ್ಟ್ರೇಲಿಯ ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಕೊಡಗು ಮೂಲದ ಚರಿಷ್ಮಾ ಭಾರೀ ಅಂತರದಲ್ಲಿ ಜಯ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಇವರು ಕೊಳಕೇರಿ ನಿವಾಸಿ ಕಲಿಯಂಡ ಮಾದಪ್ಪ ಮತ್ತು ಭಾನುಮತಿಯವರ ಪುತ್ರಿ. 35 ವರ್ಷದ ಚರಿಷ್ಮಾ ಲೇಬರ್ ಪಕ್ಷದ ಸದಸ್ಯರಾಗಿದ್ದಾರೆ. ಈ ಹಿಂದೆ ಅವರು ಎರಡು ಬಾರಿ ಹೋಲ್ಸ್ ವರ್ತಿ ಸ್ಥಾನದಿಂದ ಸ್ಪರ್ಧಿಸಿದ್ದರು.