ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ: ಉಡುಪಿಯಲ್ಲಿ ಪ್ರಸಾದ್ ಕಾಂಚನ್ ಗೆ ಸೀಟು
Thursday, April 6, 2023
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಗುರುವಾರ 42 ಮಂದಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸಿದೆ. ಉಡುಪಿಯಲ್ಲಿ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಗೆ ಟಿಕೆಟ್ ನೀಡಲಾಗಿದೆ.
ಪ್ರಸಾದ್ ರಾಜ್ ಕಾಂಚನ್ ಉದ್ಯಮಿಯಾಗಿದ್ದು, ಕಾಂಚನಾ ಹುಂಡೈ ಸಂಸ್ಥೆಯ ಮಾಲಕರಾಗಿದ್ದಾರೆ. ಕಳೆದ ಬಾರಿ ಪ್ರಮೋದ್ ಮಧ್ವರಾಜ್ ಅವರು ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಆದರೆ ಆ ಬಳಿಕ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆದ್ದರಿಂದ ಈ ಬಾರಿ ಪ್ರಸಾದ್ ಕಾಂಚನ್ ಅವರಿಗೆ ಪಕ್ಷ ಸೀಟು ನೀಡಿದೆ. ಆದರೆ ದ. ಕ ಜಿಲ್ಲೆಯ ಮೂರೂ ಕ್ಷೇತ್ರಗಳು ಇನ್ನೂ ಸಸ್ಪೆನ್ಸ್ ಆಗಿ ಉಳಿದಿವೆ.